AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬಾಸ್ ಮನೆಯಲ್ಲಿ ಕಳೆದುಹೋಯ್ತು ಡೈಮಂಡ್ ರಿಂಗ್: ಗ್ರಹಚಾರ ಬಿಡಿಸಲು ಅಶ್ವಿನಿ ಗೌಡ ರೆಡಿ

‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋ ಸ್ಥಗಿತ ಆಗುವುದಕ್ಕೂ ಮುನ್ನ ಒಂದಷ್ಟು ಘಟನೆಗಳು ನಡೆದವು. ಅಶ್ವಿನಿ ಗೌಡ ಅವರ ಮೇಕಪ್ ಕಿಟ್ ಕಾಣೆ ಆಗಿದೆ. ಡೈಮಂಡ್ ರಿಂಗ್ ಕೂಡ ಇಲ್ಲ ಎಂದು ಅವರು ಹೇಳಿದ್ದಾರೆ. ತಮ್ಮ ಡೈಮಂಡ್ ರಿಂಗ್ ಕಾಣೆ ಆಗಲು ಕಾರಣ ಆದವರಿಗೆ ಗ್ರಹಚಾರ ಬಿಡಿಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಕಳೆದುಹೋಯ್ತು ಡೈಮಂಡ್ ರಿಂಗ್: ಗ್ರಹಚಾರ ಬಿಡಿಸಲು ಅಶ್ವಿನಿ ಗೌಡ ರೆಡಿ
Ashwini Gowda
ಮದನ್​ ಕುಮಾರ್​
|

Updated on: Oct 08, 2025 | 10:37 PM

Share

ಹಲವು ಅನಿರೀಕ್ಷಿತ ತಿರುವುಗಳಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಸಾಕ್ಷಿಯಾಗಲಿದೆ ಎಂದು ಮೊದಲೇ ಊಹಿಸಲಾಗಿತ್ತು. ಅದು ಬಿಗ್ ಬಾಸ್ ಮನೆ ಒಳಗಿನ ಆಟಕ್ಕೆ ಸಂಬಂಧಿಸಿದ ವಿಚಾರ. ಆದರೆ ಬಿಗ್ ಬಾಸ್ ಮನೆಯ ಹೊರಗೆ ಕೂಡ ಅಷ್ಟೇ ಅನಿರೀಕ್ಷಿತ ತಿರುವುಗಳು ಎದುರಾಗಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯದ ಕಾರಣ ಬಿಗ್ ಬಾಸ್ ಮನೆಯನ್ನು ಬಂದ್ ಮಾಡಲಾಗಿದೆ. ಬಂದ್ ಆಗುವುದಕ್ಕೂ ಮುನ್ನ ನಡೆದ ಆಟವನ್ನು ಸದ್ಯಕ್ಕೆ ಪ್ರಸಾರ ಮಾಡಲಾಗುತ್ತಿದೆ. ಬುಧವಾರದ (ಅಕ್ಟೋಬರ್ 8) ಸಂಚಿಕೆಯಲ್ಲಿ ಅಶ್ವಿನಿ ಗೌಡ (Ashwini Gowda) ಅವರು ತಮ್ಮ ಡೈಮಂಡ್ ರಿಂಗ್ ಕಳೆದುಹೋಗಿದೆ ಎಂದು ಹೇಳಿದ್ದಾರೆ.

ಜಂಟಿಗಳು ವರ್ಸಸ್ ಒಂಟಿಗಳು ಎಂಬ ಥೀಮ್​​ನಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ಆರಂಭ ಆಗಿತ್ತು. ಕಾಕ್ರೋಜ್ ಸುಧಿ ಅವರು ಅಸುರಾಧಿಪತಿಯಾಗಿ ವಿಶೇಷ ಅಧಿಕಾರ ಪಡೆದರು. ಆದರೆ ಅವರಿಗೆ ಒಂಟಿಗಳ ತಂಡದ ಅಶ್ವಿನಿ ಗೌಡ ಅವರಿಂದ ಬೆಂಬಲ ಸಿಗಲಿಲ್ಲ. ಅಶ್ವಿನಿ ಗೌಡ ಅವರಿಗೆ ಬುದ್ಧಿ ಕಲಿಸಲು ಕಾಕ್ರೋಜ್ ಸುಧಿ ನಿರ್ಧರಿಸಿದರು. ಹಾಗಾಗಿ ಮೇಕಪ್ ಮಾಡಿಕೊಳ್ಳದಂತೆ ನಿಯಮ ವಿಧಿಸಿದರು.

ಕಾಕ್ರೋಜ್ ಸುಧಿ ಅವರು ಮೇಕಪ್ ನಿಷೇಧಿಸಿದರೂ ಕೂಡ ಅಶ್ವಿನಿ ಗೌಡ, ಜಾಹ್ನವಿ ಮುಂತಾದವರು ಮೇಕಪ್ ಮಾಡಿಕೊಳ್ಳಲು ಪ್ರಯತ್ನಿಸಿದರು. ಹಾಗಾಗಿ ಅವರ ಮೇಕಪ್ ಕಿಟ್ ಕದಿಯಲು ಕಾಕ್ರೋಜ್ ಸುಧಿ ಹುನ್ನಾರ ಮಾಡಿದರು. ಧ್ರುವಂತ್​​ಗೆ ಹೇಳಿ ಮೇಕಪ್ ಕಿಟ್ ಮುಚ್ಚಿಡುವಂತೆ ಆದೇಶಿಸಿದರು. ಬಳಿಕ ಅಶ್ವಿನಿ ಗೌಡ ಅವರ ಮೇಕಪ್ ಕಿಟ್ ಕಾಣೆ ಆಯಿತು.

ಮೇಕಪ್ ಕಿಟ್ ವಿಚಾರಕ್ಕೆ ಕೈ ಹಾಕಿದ್ದಕ್ಕೆ ಅಶ್ವಿನಿ ಗೌಡ ಅವರಿಗೆ ಕೋಪ ಬಂತು. ತಮ್ಮ ಡೈಮಂಡ್ ರಿಂಗ್ ಕಾಣುತ್ತಿಲ್ಲ ಎಂದು ಅವರು ಆರೋಪಿಸಿದರು. ಅದಕ್ಕೆ ಕಾರಣ ಆದವರಿಗೆ ಗ್ರಹಚಾರ ಬಿಡಿಸುವುದಾಗಿ ಅಶ್ವಿನಿ ಗೌಡ ಅವರು ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಮೇಕಪ್ ಕಿಟ್​​ಗೆ ಅದರದ್ದೇ ಆದ ಗೌರವ ಇದ್ದು, ಅದನ್ನು ಎಲ್ಲೆಲ್ಲೋ ಇಟ್ಟರೆ ತಾವು ಸುಮ್ಮನಿರುವುದಿಲ್ಲ ಎಂದು ಗರಂ ಆದರು.

ಇದನ್ನೂ ಓದಿ: ಬಿಗ್ ಬಾಸ್ ಸ್ಥಗಿತ ಆಗಲು ಜಾಲಿವುಡ್ ಸ್ಟುಡಿಯೋ ಮಾಡಿದ ಮುಖ್ಯ ತಪ್ಪು ಏನು?

ಇದೆಲ್ಲವೂ ಬಿಗ್ ಬಾಸ್ ಮನೆ ಬಂದ್ ಆಗುವ ತನಕ ನಡೆದ ಘಟನೆಗಳು. ಆದರೆ ಮಂಗಳವಾರ (ಅ.7) ಬಿಗ್ ಬಾಸ್ ಮನೆಗೆ ಬೀಗ ಜಡಿಯಲಾಯಿತು. ಬಳಿಕ ಎಲ್ಲ ಸ್ಪರ್ಧಿಗಳನ್ನು ರೆಸಾರ್ಟ್​​ಗೆ ಶಿಫ್ಟ್ ಮಾಡಲಾಯಿತು. ಕಾನೂನಿನ ತೊಡಕು ಪರಿಹಾರ ಆದ ಬಳಿಕ ಮತ್ತೆ ಬಿಗ್ ಬಾಸ್ ಶೋ ಆರಂಭ ಆಗಲಿದೆ. ಆಗ ಬಿಗ್ ಬಾಸ್ ಆಟವನ್ನು ಹೊಸದಾಗಿ ಆರಂಭಿಸುತ್ತಾರಾ ಅಥವಾ ಎಲ್ಲಿ ನಿಂತಿತ್ತೋ ಅಲ್ಲಿಂದಲೇ ಆರಂಭಿಸುತ್ತಾರಾ ಎಂಬ ಕೌತುಕ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
9 ಗಂಟೆ ಕಾರ್ಯಾಚರಣೆ ಬಳಿಕ ಬೋರ್​​ವೆಲ್​ನಿಂದ 4 ವರ್ಷದ ಬಾಲಕನ ರಕ್ಷಣೆ!
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಬಿಸಿಸಿಐನ ರೋಬೋ ಶ್ವಾನ ಚಂಪಕ್ ಮೇಲೆ ಕೊಹ್ಲಿ ಅಸಮಾಧಾನ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಲಕ್ಕುಂಡಿಯಲ್ಲಿ ಪತ್ತೆಯಾಗಿದ್ದ ನಿಧಿ ಮೌಲ್ಯ 8 ಕೋಟಿ ರೂ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಝಲ್ಮುರಿ ಇಲ್ಲಿಗೂ ತಲುಪಿತೇ? ಮೋದಿ ಪ್ರಶ್ನೆಗೆ ಭಾರತೀಯ ವಲಸಿಗರ ಕರತಾಡನ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!