ಈ ಯುವಕನನ್ನು ವರಿಸಲು ಅಂದ ಚಂದ ಇದ್ರೆ ಸಾಲಲ್ಲ, ಹುಡ್ಗಿಯಲ್ಲಿ ಈ ಗುಣಗಳಿರಲೇ ಬೇಕು
ಈಗಿನ ಕಾಲದಲ್ಲಿ ಮದುವೆಯಾಗಲು ಹುಡುಗಿಯೇ ಸಿಗುತ್ತಿಲ್ಲ. ಹುಡುಗಿ ಸಿಕ್ಕರೆ ಸಾಕು ಎನ್ನುವ ಗಂಡು ಮಕ್ಕಳ ನಡುವೆ ಇಲ್ಲೊಬ್ಬ ಯುವಕನು ಈ ಗುಣಗಳು ತಾನು ಮದುವೆಯಾಗುವ ಹುಡುಗಿಯಲ್ಲಿ ಇರ್ಬೇಕು ಎಂದು ಷರತ್ತುಗಳನ್ನು ಹಾಕಿದ್ದಾನೆ. ಈ ಗುಣಗಳಿದ್ರೆ ಮದ್ವೆಗೆ ಓಕೆ, ಇಲ್ಲದಿದ್ದರೆ ರಿಜೆಕ್ಟ್ ಎಂದಿದ್ದಾನೆ. ಈ ಪೋಸ್ಟ್ ಸದ್ಯ ವೈರಲ್ ಆಗಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ಈಗಿನ ಕಾಲದಲ್ಲಿ ಮದುವೆಯಾಗಲು (marriage) ಹೆಣ್ಣು ಸಿಗುವುದೇ ಕಷ್ಟ. ಆದರಲ್ಲಿಯೂ ಹೆಣ್ಣು ಮಕ್ಕಳ ಡಿಮ್ಯಾಂಡ್ ಕೇಳಿದ್ರೆ ತಲೆ ಗ್ರಿರ್ ಎನ್ನುತ್ತೆ. ಇದೆಲ್ಲದರ ನಡುವೆ ಇಲ್ಲೊಬ್ಬ ಯುವಕನು ತನ್ನನ್ನು ಮದುವೆಯಾಗುವ ಹುಡುಗಿಗೆ ಇಂತಹ ಗುಣಗಳು ಇರುವುದು ಕಡ್ಡಾಯ ಎಂದು ಪೋಸ್ಟ್ ಹಂಚಿಕೊಂಡಿದ್ದಾನೆ. ನೋಡೋಕೆ ಸುಂದರವಾಗಿದ್ರೆ ಸಾಲದು ಈ ಗುಣಗಳು ಇರೋದು ಕಡ್ಡಾಯ ಎಂದು ಹೇಳಿದ್ದಾನೆ. ಯುವಕನ ಎಕ್ಸ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಈತನಿಗೆ ಮದ್ವೆ ಆಗೋದು ಡೌಟ್ ಎಂದು ಕಾಮೆಂಟ್ ಮಾಡಿದ್ದಾರೆ.
ಆರ್ ಆರ್ (R-R) ಹೆಸರಿನ ಎಕ್ಸ್ ಖಾತೆಯಲ್ಲಿ ಯುವಕನು ತನ್ನನ್ನು ಮದುವೆಯಾಗುವ ಹುಡುಗಿಯಲ್ಲಿ ಈ ಗುಣಗಳಿರಬೇಕೆಂದು ಪೋಸ್ಟ್ ಹಂಚಿಕೊಂಡಿದ್ದಾನೆ. ಈ ಪೋಸ್ಟ್ ನಲ್ಲಿ ಸುಂದರವಾಗಿರಬೇಕು, ಮೇಕಪ್ ಮಾಡಬಾರದು.
ವೈರಲ್ ಪೋಸ್ಟ್ ಇಲ್ಲಿದೆ
I will only marry a girl who is :
– Virgin – Naturally beautiful (no makeup ever) – 5’2 perfect height – 45 kg exact weight – Knows cooking of all cuisines – Non feminist – Doesn’t use social media – Has no male friends – Asks permission before going anywhere – Shares her live…
— R-R (@Only_OneRR) August 3, 2026
5.2 ಪರಿಪೂರ್ಣ ಎತ್ತರ, 45 ಕೆಜಿ ಹೊಂದಿರಬೇಕು. ರುಚಿಕರವಾಗಿ ಅಡುಗೆ ಮಾಡಲು ಬರಬೇಕು. ಸೋಷಿಯಲ್ ಮೀಡಿಯಾ ಬಳಸದೇ ಬಾರದು. ಸ್ನೇಹಿತರ ಲಿಸ್ಟ್ ನಲ್ಲಿ ಗಂಡು ಮಕ್ಕಳು ಇರಲೇಬಾರದು. ಹೊರಗೆ ಹೋಗುವ ಮುನ್ನ ಅನುಮತಿ ಕೇಳುವುದು ಕಡ್ಡಾಯ. ತನ್ನ ಲೈವ್ ಲೊಕೇಶನ್ ಶೇರ್ ಮಾಡಿಕೊಳ್ಳಬೇಕು. ತನ್ನ ಹೆತ್ತವರನ್ನು ಸ್ವಂತ ಹೆತ್ತವರಂತೆ ನೋಡಿಕೊಳ್ಳುವ ಮನಸ್ಥಿತಿ ಇರಬೇಕು ಎಂದು ಬರೆದುಕೊಂಡಿದ್ದಾನೆ.
ಇದನ್ನೂ ಓದಿ: ಹೆರಿಗೆ ನೋವಿನಲ್ಲಿದ್ದ ಹೆಂಡ್ತಿ ಮೊಗದಲ್ಲಿ ನಗು ತರಿಸಲು ಡ್ಯಾನ್ಸ್ ಮಾಡಿದ ಗಂಡ
ಈ ಪೋಸ್ಟ್ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನೀವು ಸಿಂಗಲ್ ಆಗಿರುವುದೇ ಒಳ್ಳೆಯದು ಎಂದಿದ್ದಾರೆ. ಮತ್ತೊಬ್ಬರು, ಇಂತಹ ಗುಣಗಳಿರುವ ಹುಡುಗಿಯನ್ನು ಹುಡುಕುವತ್ತ ಗಮನ ಕೊಡಿ, ಬೆಸ್ಟ್ ಆಫ್ ಲಕ್ ಎಂದು ಹೇಳಿದ್ದಾರೆ. ಇನ್ನೊಬ್ಬರು, ನೀವು ಮನೆ ಕೆಲಸದವಳು ಬೇಕು, ಹೆಂಡ್ತಿಯಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:44 am, Wed, 5 August 26




