ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
‘ಬಿಗ್ ಬಾಸ್ ಕನ್ನಡ ಸೀಸನ್ 12’ ರಿಯಾಲಿಟಿ ಶೋಗೆ ಮ್ಯೂಟೆಂಟ್ ರಘು ಅವರು ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದರು. ಅಂತಿಮ ಹಂತದ ತನಕ ಅವರು ಸಾಗಿಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮ್ಯೂಟೆಂಟ್ ರಘು ಅವರಿಗೆ ಬಹಳಷ್ಟು ಅನುಭವಗಳು ಆಗಿವೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ಪ್ರೋಮೋ ನೋಡಿ..
ಮ್ಯೂಟೆಂಟ್ ರಘು ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದರು. ಅಂತಿಮ ಹಂತದ ತನಕ ಅವರು ಸಾಗಿಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಅವರಿಗೆ ಸಾಕಷ್ಟು ಅನುಭವ ಆಗಿದೆ. ಆ ಬಗ್ಗೆ ಅವರು ಮಾತನಾಡಿದ್ದಾರೆ. ‘ಇಷ್ಟು ಸೀಸನ್ಗಳಲ್ಲಿ ಬಂದು ಹೋದ ಎಲ್ಲರ ಬಗ್ಗೆ ನನಗೆ ಗೌರವ ಬಂದಿದೆ. ಇಷ್ಟು ದಿನ ನಾನು ಅವರಿಗೆ ಏನೇನೋ ಹೇಳುತ್ತಿದ್ದೆ. ನನಗೆ ಎಲ್ಲ ಮೌಲ್ಯಗಳು ಅರ್ಥ ಆದವು. ಇಷ್ಟು ದಿನ ನಾನು ಜೀವನದಲ್ಲಿ ಏನೆಲ್ಲ ತಪ್ಪು ಮಾಡಿದ್ದೆ ಎಂಬುದು ಗೊತ್ತಾಯಿತು. ಇಲ್ಲಿಂದ ಹೊರಗೆ ಹೋದ ಬಳಿಕ ನಾವು ತಪ್ಪುಗಳನ್ನು ಸರಿಪಡಿಸಿಕೊಂಡಿಲ್ಲ ಎಂದರೆ ನಮ್ಮಷ್ಟು ಮೂರ್ಖರು ಯಾರೂ ಇಲ್ಲ. ನನಗೆ ಜೀವನದಲ್ಲಿ ಎಂಥೆಂಥದ್ದೋ ಸಮಸ್ಯೆಗಳು ಬಂದಿವೆ. ನಾನು ಒಬ್ಬನೇ ಇರುವುದು. ಯಾವುದೇ ಬ್ಯಾಕಪ್ ಇಲ್ಲ. ಆದರೆ ಇಲ್ಲಿಗೆ ಬಂದ ಬಳಿಕ ಇನ್ನಷ್ಟು ಸ್ಟ್ರಾಂಗ್ ಆಗಿದ್ದೇನೆ. ಬಿಗ್ ಬಾಸ್ ಮನೆಯ ಅನುಭವಗಳ ಬಗ್ಗೆ ವಿಡಿಯೋ ಮಾಡಲು ಶುರು ಮಾಡುತ್ತೇನೆ’ ಎಂದು ಮ್ಯೂಟೆಂಟ್ ರಘು (Mutant Raghu) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
