ಬದಲಾಯ್ತು ಬಿಗ್ ಬಾಸ್ ಧ್ವನಿ: ಖಡಕ್ ವಾಯ್ಸ್ ಕೇಳಿ ಸ್ಪರ್ಧಿಗಳು ಗಡಗಡ
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಧ್ವನಿ ಬದಲಾಗಿದೆ. ಬಿಗ್ ಬಾಸ್ ಬದಲು ವಿಲನ್ ಆಗಮಿಸಿದ್ದಾರೆ. ಇಷ್ಟು ದಿನ ಬಿಗ್ ಬಾಸ್ ನೀಡುತ್ತಿದ್ದ ಸೂಚನೆಗಳ ಬದಲಿಗೆ ವಿಲನ್ ಸೂಚನೆ ನೀಡುತ್ತಿದ್ದಾರೆ. ವಿಲನ್ ಧ್ವನಿ ಖಡಕ್ ಆಗಿದೆ. ಪ್ರೋಮೋದಲ್ಲಿ ಆ ಧ್ವನಿ ಇದೆ ಕೇಳಿ..
‘ಬಿಗ್ ಬಾಸ್’ (Bigg Boss Kannada) ರಿಯಾಲಿಟಿ ಶೋನಲ್ಲಿ ಕೇಳಿಸುವ ಬಿಗ್ ಬಾಸ್ ಧ್ವನಿಗೆ ಒಂದು ತಾಕತ್ತು ಇದೆ. ಆ ಧ್ವನಿ ಕೇಳಿದರೆ ಎಲ್ಲ ಸ್ಪರ್ಧಿಗಳು ಸೈಲೆಂಟ್ ಆಗುತ್ತಾರೆ. ಆ ಧ್ವನಿಯ ಮುಂದೆ ಎಲ್ಲರೂ ಗಪ್ ಚುಪ್ ಆಗಲೇಬೇಕು. ಅದು ರಿಯಾಲಿಟಿ ಶೋನ ಮೂಲ ನಿಯಮ. ಅಚ್ಚರಿ ಎಂದರೆ, ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಆ ಧ್ವನಿ (Bigg Boss Kannada Voice) ಬದಲಾಗಿದೆ. ಬಿಗ್ ಬಾಸ್ ಬದಲು ವಿಲನ್ ಆಗಮಿಸಿದ್ದಾರೆ. ಇಷ್ಟು ದಿನ ಬಿಗ್ ಬಾಸ್ ನೀಡುತ್ತಿದ್ದ ಸೂಚನೆಗಳ ಬದಲಿಗೆ ವಿಲನ್ ಸೂಚನೆ ನೀಡುತ್ತಿದ್ದಾರೆ. ವಿಲನ್ ಧ್ವನಿ ಖಡಕ್ ಆಗಿದೆ. ಆ ವಾಯ್ಸ್ ಕೇಳಿ ಸ್ಪರ್ಧಿಗಳು ಗಡಗಡ ನಡುಗುತ್ತಿದ್ದಾರೆ. ಚೈತ್ರಾ ಕುಂದಾಪುರ ಅವರು ಹದರಿಕೊಂಡಿದ್ದಾರೆ. ಆ ಧ್ವನಿಯ ಝಲಕ್ ಹೇಗಿದೆ ಎಂಬುದು ಈ ಪ್ರೋಮೋದಲ್ಲಿ ನೋಡಬಹುದು. ‘ಕಲರ್ಸ್ ಕನ್ನಡ’ ಮತ್ತು ‘ಜಿಯೋ ಹಾಟ್ಸ್ಟಾರ್’ ಒಟಿಟಿ ಮೂಲಕ ಪೂರ್ತಿ ಸಂಚಿಕೆ ವೀಕ್ಷಿಸಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

