ಮಂಜನ ಆ ವರ್ತನೆಯಿಂದ ನನಗೆ ತುಂಬ ನೋವಾಯಿತು: ಬಿಗ್ ಬಾಸ್ ಕಾವ್ಯಾ ಗೌಡ

Edited By:

Updated on: Oct 19, 2026 | 6:08 PM

ಬಿಗ್ ಬಾಸ್ ಮನೆಯಿಂದ ನಟಿ ಕಾವ್ಯಾ ಗೌಡ ಹೊರಗೆ ಬಂದಿದ್ದಾರೆ. ಎಲಿಮಿನೇಟ್ ಆದ ಬಳಿಕ ಮೊದಲ ಬಾರಿಗೆ ಟಿವಿ9 ಜತೆ ಮಾತನಾಡಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ತಮಗೆ ಹರ್ಟ್ ಆಗಿದ್ದು ಏನು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ನಟಿ ಕಾವ್ಯಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ. ಎಲಿಮಿನೇಟ್ ಆದ ಬಳಿಕ ಮೊದಲ ಬಾರಿಗೆ ಟಿವಿ9 ಜೊತೆ ಮಾತನಾಡಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ತಮಗೆ ಹರ್ಟ್ ಆಗಿದ್ದು ಏನು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ. ‘ಮಂಜ ಅವರು ಯಾವಾಗಲೂ ನನ್ನನ್ನು ಕೆಣಕುತ್ತಿದ್ದರು. ರಾಕ್ಷಸರು ವರ್ಸಸ್ ಗಂಧರ್ವರು ಟಾಸ್ಕ್​ನಲ್ಲಿ ತುಂಬ ತೊಂದರೆ ಕೊಟ್ಟರು. ಕೂದಲು ಎಂದರೆ ನನಗೆ ತುಂಬಾ ಪ್ರೀತಿ. ಆದರೆ ಅವರು ನನ್ನ ಕೂದಲಿಗೆ ಶೇವಿಂಗ್ ಕ್ರೀಮ್ ಆಗಿದರು. ಮೇಕಪ್ ಬಗ್ಗೆ ಅವರು ಆಡಿದ ಮಾತುಗಳಿಂದ ನನಗೆ ವೈಯಕ್ತಿಕವಾಗಿ ಬಹಳ ನೋವಾಯಿತು’ ಎಂದು ಕಾವ್ಯಾ ಗೌಡ ಅವರು ಹೇಳಿದ್ದಾರೆ. ಬಿಗ್ ಬಾಸ್ ಶೋನಿಂದ ಹೊರಬಂದಿರುವ ಅವರು ಈಗ ಒಳ್ಳೆಯ ಅವಕಾಶವನ್ನು ಎದುರುನೋಡುತ್ತಿದ್ದಾರೆ. ಆ ಬಗ್ಗೆ ಕೂಡ ಈ ವಿಡಿಯೋದಲ್ಲಿ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮಾಲತೇಶ ಜಗ್ಗೀನ್

ಮಾಲತೇಶ ಜಗ್ಗೀನ್. Tv9 ಕನ್ನಡ ವಾಹಿನಿ ಫಿಲಂ ಬ್ಯೂರೋ ಮುಖ್ಯಸ್ಥನಾಗಿ ಕೆಲಸ ಮಾಡ್ತಿದ್ದಾರೆ. ಮಾಲತೇಶ ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕು ಹೊಳಲು ಗ್ರಾಮದವರು. ಕಳೆದ 15 ವರ್ಷಗಳಲ್ಲಿ ಮಾಧ್ಯಮ ಲೋಕದ ವಿವಿಧ ವಿಭಾಗಗಳಲ್ಲಿ ವರದಿಗಾರಿಕೆ ಮಾಡಿದ ಅನುಭವ ಇದೆ. ಸಿನಿಮಾ ವಿಭಾಗದ ಜೊತೆ ರಾಜಕೀಯ, ಮೆಟ್ರೋ, ಕ್ರೈಂ ವಿಭಾಗದಲ್ಲೂ ಕೆಲವು ಸನ್ನಿವೇಶಗಳಲ್ಲಿ ವರದಿಗಾರಿಕೆ ಮಾಡಿದ್ದಾರೆ. ಹಾವೇರಿಯ ಕೆಎಫ್ ಚಾನಲ್ , ನಂತರ ಬೆಂಗಳೂರಿನ ಸಮಯ ನ್ಯೂಸ್, ಜನಶ್ರಿ ನ್ಯೂಸ್, ಪಬ್ಲಿಕ್ ಟಿವಿ ಸೇರಿದಂತೆ ವಿವಿಧ ವಾಹಿನಿಗಳಲ್ಲಿ ಕೆಲಸ ಮಾಡಿದ ಅನುಭವ ಇದೆ. Tv9kannada ನ್ಯೂಸ್ ಚಾನಲ್ ನಲ್ಲಿ ಕಳೆದ 10 ವರ್ಷಗಳಿಂದ ಇದ್ದಾರೆ. ಕಲೆ, ಸಾಹಿತ್ಯ, ಸಿನಿಮಾ, ಕ್ರಿಡೆ ಆಸಕ್ತಿ ವಿಷಯಗಳು.

Read More