ಅರವಿಂದ್ ನನ್ನ ಜಾತಿ ಅದಕ್ಕಾಗಿ ಸೋತ್ರಾ?; ಪರಮೇಶ್ವರ್ ಗುಂಡ್ಕಲ್ ನೇರ ಪ್ರಶ್ನೆ
‘ಕನ್ನಡ ಬಿಗ್ ಬಾಸ್ ಸೀಸನ್ 8’ ಪೂರ್ಣಗೊಂಡಿದೆ. ಕೊವಿಡ್ ಕಾರಣದಿಂದ ಬಿಗ್ ಬಾಸ್ ಶೋ ಆರಂಭ ವಿಳಂಬವಾಗಿತ್ತು. ಕೊರೊನಾ ಕಾರಣದಿಂದ ಶೋ ಅರ್ಧಕ್ಕೆ ನಿಂತಿತ್ತು. ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಮತ್ತೆ ಆರಂಭಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ.
ಬಿಗ್ಬಾಸ್ ಸಾರಥಿ ಕಿಚ್ಚ ಸುದೀಪ್ ಹಾಗೂ ಮಂಜು ಪಾವಗಡ ಒಂದೇ ಜಾತಿಯವರಾಗಿದ್ದೇ ಮಂಜು ಗೆಲುವಿಗೆ ವರದಾನವಾಯಿತು ಎಂದು ಕೆಲವರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಈ ರೀತಿ ಬರೆದುಕೊಂಡಿದ್ದಾರೆ. ಈ ಪ್ರಶ್ನೆಗೆ ಕಲರ್ಸ್ ಕನ್ನಡ ಬ್ಯುಸಿನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಉತ್ತರ ನೀಡಿದ್ದಾರೆ.
‘ಕನ್ನಡ ಬಿಗ್ ಬಾಸ್ ಸೀಸನ್ 8’ ಪೂರ್ಣಗೊಂಡಿದೆ. ಕೊವಿಡ್ ಕಾರಣದಿಂದ ಬಿಗ್ ಬಾಸ್ ಶೋ ಆರಂಭ ವಿಳಂಬವಾಗಿತ್ತು. ಕೊರೊನಾ ಕಾರಣದಿಂದ ಶೋ ಅರ್ಧಕ್ಕೆ ನಿಂತಿತ್ತು. ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಮತ್ತೆ ಆರಂಭಿಸಿ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ದೊಡ್ಡಮನೆಯ ಒಳಗೆ ಬಂಧಿಯಾಗಿ ಜನರಿಗೆ ಮನರಂಜನೆ ನೀಡುತ್ತಿದ್ದವರೆಲ್ಲಾ ಇದೀಗ ಹೊರಗೆ ಬಂದು ತಮ್ಮ ಪ್ರಯಾಣ ಹೇಗಿತ್ತು ಎಂದು ಮೆಲುಕು ಹಾಕುತ್ತಿದ್ದಾರೆ. ಅದೇ ರೀತಿ ಪರಮೇಶ್ವರ್ ಗುಂಡ್ಕಲ್ ಕೂಡ ಬಿಗ್ ಬಾಸ್ ಜರ್ನಿ ಬಗ್ಗೆ ಮಾತನಾಡಿದ್ದಾರೆ.
ಇದನ್ನೂ ಓದಿ: ‘ನನ್ನರಸಿ ರಾಧೆ’ ನಟಿ ಕೌಸ್ತುಭ ಅವರ ಮೈನಸ್ ಪಾಯಿಂಟ್ ಏನು? ಬಿಗ್ ಬಾಸ್ ಮನೆಯಲ್ಲಿ ಸತ್ಯ ಬಾಯ್ಟಿಟ್ಟ ಇಂಚರ