ಆನ್​ಲೈನ್​ನಲ್ಲಿ ನೀವು ಆರ್ಡರ್ ಮಾಡುವ ಪದಾರ್ಥಗಳನ್ನು ಜಿಪ್ ಎಲೆಕ್ಟ್ರಿಕ್ ಡೆಲಿವರಿ ಬಾಯ್​ಗಳು ಮನೆಗೆ ತಂದರೆ ಆಶ್ಚರ್ಯಪಡಬೇಡಿ!

ಆನ್​ಲೈನ್​ನಲ್ಲಿ ನೀವು ಆರ್ಡರ್ ಮಾಡುವ ಪದಾರ್ಥಗಳನ್ನು ಜಿಪ್ ಎಲೆಕ್ಟ್ರಿಕ್ ಡೆಲಿವರಿ ಬಾಯ್​ಗಳು ಮನೆಗೆ ತಂದರೆ ಆಶ್ಚರ್ಯಪಡಬೇಡಿ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Aug 14, 2021 | 9:11 PM

ಜಿಪ್ ಎಲೆಕ್ಟ್ರಿಕ್ ಒಂದು ಸ್ಟಾರ್ಟ್ಅಪ್ ಕಂಪನಿಯಾಗಿದ್ದು ತಲಾ 100 ಬೈಕ್ಗಳನ್ನು ಸವಾರರೊಂದಿಗೆ ಪುಣೆ ಮತ್ತು ಬೆಂಗಳೂರಿಗೆ ಕಳಿಸಿದೆ. ಇದರೊಂದಿಗೆ ಪುಣೆ ನಗರವು ಜಿಪ್ ಎಲೆಕ್ಟ್ರಿಕ್ ಸೇವೆ ಹೊಂದಿರುವ ಮೊದಲ ಪಶ್ಚಿಮ ಭಾರತ ನಗರವೆನಿಸಿಕೊಂಡಿದೆ

ಇನ್ನೇನಿದ್ದರೂ ಎಲೆಕ್ಟ್ರಿಕ್ ವಾಹನಗಳ ಜಮಾನಾ ಮಾರಾಯ್ರೇ. ಭಾರತದಲ್ಲಿ ಕಾರು ಮತ್ತು ದ್ವಿಚಕ್ರ ವಾಹನಗಳನ್ನು ತಯಾರಿಸುವ ಕಂಪನಿಗಳು ಒಂದೊಂದಾಗಿ ಇವಿಗಳ ಉತ್ಪಾದನೆಗೆ ಇಂಬು ನೀಡಲಾರಂಭಿಸಿವೆ. ಜಿಪ್ ಎಲೆಕ್ಟ್ರಿಕ್ ಬಗ್ಗೆ ನೀವು ಕೇಳಿರಬಹುದು. ನೀವು ಬೆಂಗಳೂರಿನವರಾಗಿದ್ದರೆ ಇನ್ನು ಮುಂದೆ ಅದನ್ನು ನೋಡಲೂಬಹುದು. ಸದರಿ ಕಂಪನಿಯು ಬೆಂಗಳೂರು ಮತ್ತು ಪುಣೆ ನಗರಗಲ್ಲಿ ಸೇವೆಯನ್ನು ಆರಂಭ ಮಾಡುವ ಬಗ್ಗೆ ಪ್ರಕಟಣೆ ನೀಡಿದೆ.

ಜಿಪ್ ಎಲೆಕ್ಟ್ರಿಕ್ ಒಂದು ಸ್ಟಾರ್ಟ್ಅಪ್ ಕಂಪನಿಯಾಗಿದ್ದು ತಲಾ 100 ಬೈಕ್ಗಳನ್ನು ಸವಾರರೊಂದಿಗೆ ಪುಣೆ ಮತ್ತು ಬೆಂಗಳೂರಿಗೆ ಕಳಿಸಿದೆ. ಇದರೊಂದಿಗೆ ಪುಣೆ ನಗರವು ಜಿಪ್ ಎಲೆಕ್ಟ್ರಿಕ್ ಸೇವೆ ಹೊಂದಿರುವ ಮೊದಲ ಪಶ್ಚಿಮ ಭಾರತ ನಗರವೆನಿಸಿಕೊಂಡಿದೆ. ಭಾರತದ ಇತರ 7 ನಗರಗಳಲ್ಲಿ-ನವದೆಹಲಿ, ನೊಯಿಡಾ, ಘಾಜಿಯಾಬಾದ್, ಜೈಪುರ್, ಗುರುಗ್ರಾಮ್, ಫರೀದಾಬಾದ್, ಹೈದರಾಬಾದ್ ಗಳಲ್ಲಿ ಜಿಪ್ ಎಲೆಕ್ಟ್ರಿಕ್ ತನ್ನ ಸೇವೆಯನ್ನು ಈಗಾಗಲೇ ಆರಂಭಿಸಿದೆ.

ಒಂದು ವಿಶಿಷ್ಟ ಕಲ್ಪನೆಯೊಂದಿಗೆ ಜಿಪ್ ಎಲೆಕ್ಟ್ರಿಕ್ ಫೀಲ್ಡಿಗಿಳಿದಿದೆ. ಇದು ತನ್ನ ಬೈಕ್​ಗಳನ್ನು ಶೋರೂಮ್​ಗಳಲ್ಲಿ ಮಾರಾಟಕ್ಕೆ ಇಟ್ಟಿಲ್ಲ. ಆದರೆ ಕಿರಾಣಾ, ಆಹಾರ ಸಾಮಗ್ರಿಗಳನನ್ನು ಮನೆಗೆ ತಲುಪಿಸುವ ಈ-ಕಾಮರ್ಸ್ ಸಂಸ್ಥೆಗಳಾಗಿರುವ ಬಿಗ್ ಬಾಸ್ಕೆಟ್, ಬಿದ್ದ್ಯಾನೋ, ಗ್ರೋಫರ್ಸ್ ಮತ್ತು ಫ್ಲಿಪ್​ಕಾರ್ಟ್​ಗಳೊಂದಿಗೆ ಟೈಅಪ್ ಮಾಡಿಕೊಂಡಿದೆ. ನೀವು ಈ ಸಂಸ್ಥೆಗಳಿಗೆ ಆರ್ಡರ್ ಮಾಡುವ ಸಾಮಾನುಗಳನ್ನು ಜಿಪ್ ಎಲೆಕ್ಟ್ರಿಕ್ ಡೆಲಿವರಿ ಹುಡುಗರು ನಿಮ್ಮ ಮನೆಗೆ ತಲುಪಿಸುತ್ತಾರೆ. ಸಂಸ್ಥೆಯ ಮೂಲಗಳು ತಿಳಿಸಿರುವ ಹಾಗೆ ಡೆಲಿವರಿ ವ್ಯವಸ್ಥೆ ಎಪಿಐ ಇಂಟಿಗ್ರೇಶನ್ ಮೂಲಕ ನಡೆಯಲಿದೆ.

ಮತ್ತೊಂದು ಸಂಗತಿಯನ್ನು ಇಲ್ಲಿ ಉಲ್ಲೇಖಿಸಬೇಕು. ಇವು ಎಲೆಕ್ಟ್ರಿಕ್ ವಾಹನಗಳಾಗಿರುವುದರಿಂದ ಬ್ಯಾಟರಿಗಳನ್ನು ಚಾರ್ಜ್ ಮಾಡುವ ವ್ಯವಸ್ಥೆ ಬೇಕು. ಅದಕ್ಕಾಗಿ ಬೆಂಗಳೂರು ಮತ್ತು ಪುಣೆ ಎರಡು ನಗರಗಳಲ್ಲೂ ಜಿಪ್ ಎಲೆಕ್ಟ್ರಿಕ್ ಸಂಸ್ಥೆಯು ತಲಾ 20 ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಿದೆ. ಈ ಕೇಂದ್ರಗಳಿಲ್ಲದೆ ವಾಹನಗಳು ಸರಾಗ ಓಡಾಟ ನಡೆಸಲಾರವು.

ಇದನ್ನೂ ಓದಿ: ಕೆಲಸ ಮಾಡಲು ಬಿಡದೆ ಜಾತಿನಿಂದನೆ ಮಾಡಿದ ಆರೋಪ; ವಿಷ ಸೇವಿಸುವ ವಿಡಿಯೋ ಮಾಡಿ ಬಿಲ್ ಕಲೆಕ್ಟರ್ ಕಣ್ಣೀರು

Published on: Aug 14, 2021 09:09 PM