ತ್ರಿವಿಕ್ರಮ್​ ಬಗ್ಗೆ ಭವ್ಯಾ ಹೇಳಿದ ಮಾತು ಕೇಳಿ ನಕ್ಕ ಕಿಚ್ಚ

Updated on: Dec 29, 2024 | 10:42 AM

Bigg Boss Kannada: ಬಿಗ್​ಬಾಸ್ ಮನೆಯಲ್ಲಿ ಹೊಸ ಆಕ್ಟಿವಿಟಿಯೊಂದನ್ನು ಸುದೀಪ್ ಮಾಡಿಸಿದ್ದಾರೆ. ಸ್ಪರ್ಧಿಗಳು ಇತರೆ ಸ್ಪರ್ಧಿಗಳಿಗೆ ಗಿಫ್ಟ್ ನೀಡಿದ್ದಾರೆ. ಈ ವೇಳೆ ಭವ್ಯಾ, ತ್ರಿವಿಕ್ರಮ್ ಬಗ್ಗೆ ಆಡಿದ ಮಾತು ಕೇಳಿ ಮನೆ ಮಂದಿಯೆಲ್ಲ ನಕ್ಕಿದ್ದಾರೆ. ಸುದೀಪ್ ಸಹ ಭವ್ಯಾ ಹಾಗೂ ತ್ರಿವಿಕ್ರಮ್ ಅವರ ಕಾಲೆಳೆದಿದ್ದಾರೆ.

ಬಿಗ್​ಬಾಸ್ ಮನೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಎರಡು ದಿನಕ್ಕೆ ಮುಂಚೆಯೇ ಶುರುವಾಗಿದೆ. ಭಾನುವಾರದ ಎಪಿಸೋಡ್​ನಲ್ಲಿ ಸುದೀಪ್ ಆಕ್ಟಿವಿಟಿ ಒಂದನ್ನು ಮಾಡಿಸಿದ್ದಾರೆ. ಸ್ಪರ್ಧಿಗಳು ತಮ್ಮದಾದ ವಸ್ತುವೊಂದನ್ನು ತಮ್ಮ ಪ್ರೀತಿ ಪಾತ್ರರಿಗೆ ನೀಡಬೇಕಿತ್ತು, ಹಲವರು ತಮ್ಮ ವಸ್ತುಗಳನ್ನು ಇತರ ಸ್ಪರ್ಧಿಗಳಿಗೆ ನೀಡಿದರು. ಚೈತ್ರಾ ಅವರು, ಐಶ್ವರ್ಯಾಗೆ ವಸ್ತುವೊಂದನ್ನು ಕೊಟ್ಟರು, ಇದು ಮನೆಯಲ್ಲಿ ಭಾವುಕ ಸನ್ನಿವೇಶ ಸೃಷ್ಟಿಸಿತು. ಅದಾದ ಬಳಿಕ ಎಲ್ಲರ ನಿರೀಕ್ಷೆಯಂತೆ ಭವ್ಯಾ ಗೌಡ, ತಮ್ಮ ಆತ್ಮೀಯ ಗೆಳೆಯ ತ್ರಿವಿಕ್ರಮ್​ಗೆ ವಸ್ತುವೊಂದನ್ನು ಉಡುಗೊರೆಯಾಗಿ ನೀಡಿದರು. ಆ ನಂತರ ತ್ರಿವಿಕ್ರಮ ಅವರ ಗುಣವನ್ನು ಹೊಗಳಿ ಕೊಂಡಾಡಿದರು. ಇದನ್ನು ಕೇಳಿ ಸುದೀಪ್ ಜೋಕ್ ಮಾಡಿದರು. ಅದು ಮನೆಯಲ್ಲಿ ನಗುವಿನ ಅಲೆ ಎಬ್ಬಿಸಿತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More