ಗಗನ್ ನಡೆಗೆ ಕಣ್ಣೀರು ಹಾಕುವಷ್ಟು ಬೇಸರ ಮಾಡಿಕೊಂಡ ತಾಂಡವ್
ಬಿಗ್ ಬಾಸ್ ಮನೆಯಲ್ಲಿ ಗಗನ್ ಹಾಗೂ ತಾಂಡವ್ ಗೆಳೆತನ ತುಂಬಾನೇ ಗಮನ ಸೆಳೆಯುತ್ತಿದೆ. ಆದರೆ, ಈಗ ಗಗನ್ ಅವರ ನಡೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಅವರು ನಡೆದುಕೊಂಡ ರೀತಿ ಸರಿ ಇಲ್ಲ ಎಂಬ ಮಾತು ಕೇಳಿ ಬಂದಿದೆ. ಇದಕ್ಕೆ ಕಾರಣ ಆಗಿದ್ದು ಸೌಂದರ್ಯಾ ಅವರ ಮಾತು. ಆ ಬಗ್ಗೆ ಇಲ್ಲಿದೆ ವಿವರ.
ಬಿಗ್ ಬಾಸ್ ಮನೆಯಲ್ಲಿ ತಾಂಡವ್ ರಾಮ್ ಹಾಗೂ ಗಗನ್ ಗೆಳೆತನ ಉತ್ತಮವಾಗಿತ್ತು. ಆದರೆ, ಇವರ ಗೆಳೆತನ ಈಗ ಮುರಿದುಬೀಳುವ ಹಂತ ತಲುಪಿದೆ. ಗಗನ್ ಹಾಗೂ ಸೌಂದರ್ಯಾ ಮಾತನಾಡುವಾಗ, ‘ಗಗಬ್ ಡಂಬ್ ವ್ಯಕ್ತಿ’ ಎಂದು ಸೌಂದರ್ಯಾ ಹೇಳಿದ್ದರು. ಆಗ ಗಗನ್ ಸುಮ್ಮನೆ ಕುಳಿತಿದ್ದರು. ಈಗ ಇದರ ವಿಟಿಯನ್ನು ತಾಂಡವ್ಗೆ ತೋರಿಸಲಾಗಿದೆ. ಇದರಿಂದ ತಾಂಡವ್ ಬೇಸರಗೊಂಡಿದ್ದಾರೆ. ಆಗ ಗಗನ್ ಸಮಾಧಾನ ಮಾಡಲು ಮುಂದಾಗಿದ್ದಾರೆ. ‘ನೀವು ಈ ವಿಷಯವನ್ನು ಅಂದೇ ಮಾತನಾಡಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು’ ಎಂದು ಯಶಸ್ ಹೇಳಿದ್ದಾರೆ. ಇದು ಅನೇಕರಿಗೆ ನಿಜ ಎನಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Oct 19, 2026 08:52 AM
Loading...
Unable to load recommendations.
Follow Us
