‘ಖಾತೆ ಹ್ಯಾಕ್ ಆಗಿದೆ, ಕಮೆಂಟ್ ಇಲ್ಲ, ಫಾಲೋವರ್ಸ್ ಇಲ್ಲ’: ತುಕಾಲಿ ಸಂತೋಷ್
ತುಕಾಲಿ ಸಂತೋಷ್ ಅವರು 5ನೇ ರನ್ನರ್ಅಪ್ ಆಗಿ ಬಿಗ್ ಬಾಸ್ ಜರ್ನಿ ಮುಗಿಸಿದ್ದಾರೆ. ಈ ಶೋನಿಂದ ಅವರ ಖ್ಯಾತಿ ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ ಇಲ್ಲದಿದ್ದರೂ ಕೂಡ ಫಿನಾಲೆ ತನಕ ಬಂದಿದ್ದಕ್ಕೆ ಜನರ ಬೆಂಬಲವೇ ಕಾರಣ ಎಂದು ಅವರು ಹೇಳಿದ್ದಾರೆ.
ಬಿಗ್ ಬಾಸ್ (BBK 10) ಶೋನಲ್ಲಿ ಹಾಸ್ಯ ನಟ ತುಕಾಲಿ ಸಂತೋಷ್ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದರು. ಫಿನಾಲೆವರೆಗೂ ಬಂದ ಅವರು ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರ ಪರವಾಗಿ ಯಾವುದೇ ರೀತಿ ಪ್ರಚಾರ ನಡೆದಿರಲಿಲ್ಲ. ಆ ಬಗ್ಗೆ ತುಕಾಲಿ ಸಂತೋಷ್ (Tukali Santhosh) ಮಾತನಾಡಿದ್ದಾರೆ. ‘ನನ್ನ ಇನ್ಸ್ಟಾಗ್ರಾಮ್ ಖಾತೆ ಹ್ಯಾಕ್ ಆಗಿದೆ. ನನಗೆ ಒಂದೇ ಒಂದು ಕಮೆಂಟ್ ಇಲ್ಲ, ಫ್ಯಾನ್ ಪೇಜ್ ಇಲ್ಲ, ಫಾಲೋವರ್ಸ್ ಇಲ್ಲ. ಆದರೂ ನಾನು ಹೊರಗೆ ಬಂದ ಬಳಿಕ ಸಂತು ನೀನು ಇಲ್ಲದೇ ಬಿಗ್ ಬಾಸ್ ಇಲ್ಲ ಅಂತಾರೆ. ಅಂದರೆ, ನನ್ನ ಜನ ಹೊರಗೆ ಇದ್ದಾರೆ. ಫ್ಯಾನ್ ಪೇಜ್ಗಿಂತಲೂ ದೊಡ್ಡದು ಇದೆ. ಅದಕ್ಕೆ ಬೆಲೆ ಕಟ್ಟೋಕೆ ಆಗಲ್ಲ’ ಎಂದು ತುಕಾಲಿ ಸಂತೋಷ್ ಹೇಳಿದ್ದಾರೆ. 5ನೇ ರನ್ನರ್ಅಪ್ ಆಗಿ ಅವರು ಬಿಗ್ ಬಾಸ್ ಜರ್ನಿ ಮುಗಿಸಿದ್ದಾರೆ. ಈ ಶೋನಿಂದ ಅವರ ಖ್ಯಾತಿ ಹೆಚ್ಚಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Jan 29, 2024 09:04 PM