ಕೊಡೊ ಕಾಟಕ್ಕೆ ತಾಯ್ತ ಕಟ್ಟಿಸ್ಕೋಬೇಕು: ನಗುತ್ತಲೇ ಎಚ್ಚರಿಕೆ ಕೊಟ್ಟ ರಜತ್

Updated on: Nov 20, 2024 | 3:31 PM

Bigg Boss Kannada: ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿರುವ ರಜತ್ ಮತ್ತು ಶೋಭಾ ಶೆಟ್ಟಿ ಇಬ್ಬರೂ ಅಗ್ರೆಸ್ಸಿವ್ ಆಗಿ ಆಡುತ್ತಿದ್ದಾರೆ. ಅದರಲ್ಲೂ ದೈತ್ಯ ದೇಹಿ ರಜತ್ ಹೆಚ್ಚು ಆಕ್ರಮಣಕಾರಿಯಾಗಿದ್ದಾರೆ. ಇದೀಗ ಮನೆಯ ಮಹಿಳಾ ಸದಸ್ಯರ ಮುಂದೆ ನಗುತ್ತಲೇ ಸಣ್ಣ ಎಚ್ಚರಿಕೆ ನೀಡಿದ್ದಾರೆ.

ಬಿಗ್​ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಶೋಭಾ ಶೆಟ್ಟಿ ಮತ್ತು ರಜತ್ ಬಂದಿದ್ದಾರೆ. ಇಬ್ಬರೂ ಅಗ್ರೆಸ್ಸಿವ್ ಆಟಗಾರರೇ ಆಗಿದ್ದಾರೆ. ಬಂದ ಮೊದಲ ದಿನವೇ ಮನೆಯ ಸದಸ್ಯರಿಗೆ ಭಯ ಹುಟ್ಟಿಸಿದ್ದಾರೆ. ಅದರಲ್ಲೂ ರಜತ್ ಅಂತೂ ಜೋರು ಧನಿಯಲ್ಲಿ ಮಾತನಾಡುತ್ತಾ ಆಕ್ರಮಣಕಾರಿ ಆಟ ಆಡುತ್ತಿದ್ದಾರೆ. ಈಗ ಮನೆಯಲ್ಲಿ ಟಾಸ್ಕ್ ಒಂದು ನಡೆಯುತ್ತಿದ್ದು, ಮನೆಯ ಕೆಲ ಮಹಿಳಾ ಸದಸ್ಯರ ಮುಂದೆ ನಗುತ್ತಲೇ ಎಚ್ಚರಿಕೆ ನೀಡಿದ್ದಾರೆ. ಡೀಲ್ ಒಂದು ಮಾಡಿಕೊಂಡಿದ್ದೀವಿ, ಕೊಡೋ ಕಾಟಕ್ಕೆ ತಾಯ್ತ ಕಟ್ಟಿಸಿಕೊಳ್ಳಬೇಕು, ನಿಮಗೆ ತಾಯ್ತ ಕಟ್ಟಿಸಿಲ್ಲ ಅಂದ್ರೆ ನನ್ನ ಹೆಸರು ಬುಜ್ಜಿಯೇ ಅಲ್ಲ’ ಎಂದಿದ್ದಾರೆ ರಜತ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More