ಕಿತ್ತಾಟದಿಂದ ರದ್ದಾಯ್ತು ಟಾಸ್ಕ್; ದೊಡ್ಡ ಪರಿಣಾಮ ಎದುರಿಸಿದ ಮನೆ ಮಂದಿ

|

Updated on: Dec 18, 2024 | 8:02 AM

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಅಗ್ರೆಶನ್ ಜೋರಾಗುತ್ತಿದೆ. ಸ್ಪರ್ಧಿಗಳ ಮಧ್ಯೆ ಕಿತ್ತಾಟಗಳು ಮಿತಿ ಮೀರುತ್ತಿವೆ. ಈಗ ದೊಡ್ಮನೆಯಲ್ಲಿ ಕಿತ್ತಾಟ ಒಂದು ನಡೆದಿದೆ. ಆಡುವಾಗ ನಡೆದ ಈ ಕಿತ್ತಾಟದಿಂದ ದೊಡ್ಮನೆಯ ಟಾಸ್ಕ್ ರದ್ದಾಗಿ ಹೋಗಿದೆ. ಇದಕ್ಕೆ ಬಿಗ್ ಬಾಸ್ ಶಿಕ್ಷೆ ಕೂಡ ಘೋಷಣೆ ಮಾಡಿದ್ದಾರೆ.

‘ಬಿಗ್ ಬಾಸ್​’ನಲ್ಲಿ ಟಾಸ್ಕ್​ಗಳನ್ನು ರಚನೆ ಮಾಡುವಾಗ ಅದಕ್ಕೆ ತಂಡದವರು ಸಾಕಷ್ಟು ಶ್ರಮ ಹಾಕಿರುತ್ತಾರೆ. ಗೇಮ್ ರಚನೆಗೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಇದಕ್ಕೆ ಗೌರವ ಕೊಡದೇ ಇದ್ದಾಗ ಬಿಗ್ ಬಾಸ್ ಕೋಪಗೊಳ್ಳುತ್ತಾರೆ. ಈಗಲೂ ಹಾಗೆಯೇ ಆಗಿದೆ. ದೊಡ್ಮನೆಯಲ್ಲಿ ಆಡುವಾಗ ನಡೆದ ಈ ಕಿತ್ತಾಟದಿಂದ ದೊಡ್ಮನೆಯ ಟಾಸ್ಕ್ ರದ್ದಾಗಿ ಹೋಗಿದೆ. ಇದರಿಂದ ಎಲ್ಲರನ್ನೂ ನಾಮಿನೇಟ್ ಮಾಡುವ ಅಧಿಕಾರವನ್ನು ಬಿಗ್ ಬಾಸ್ ತೆಗೆದುಕೊಂಡರೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published on: Dec 18, 2024 08:02 AM