ಲಾಲು ಪ್ರಸಾದ್, ರಾಬ್ರಿ ಭ್ರಷ್ಟ ವಂಚಕರು; ಬಿಹಾರದಲ್ಲಿ ಅಮಿತ್ ಶಾ ವಾಗ್ದಾಳಿ
ಆರ್ಜೆಡಿ ನಾಯಕರಾದ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ಇಬ್ಬರೂ ಭ್ರಷ್ಟ ವಂಚಕರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬಿಹಾರದ ಅಭಿವೃದ್ಧಿಗಾಗಿ ಎನ್‌ಡಿಎಯನ್ನು ಬೆಂಬಲಿಸುವಂತೆ ಅವರು ಬಿಹಾರ ಮತದಾರರನ್ನು ಒತ್ತಾಯಿಸಿದ್ದಾರೆ. ಬಿಹಾರದ ವಿಧಾನಸಭಾ ಚುನಾವಣೆಗೂ ಮುನ್ನ ಇಂದು ಲಖಿಸರೈನಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ 2005ಕ್ಕಿಂತ ಮೊದಲು ಇಡೀ ಬಿಹಾರವು ಜಂಗಲ್ ರಾಜ್ಯದ ಹಿಡಿತದಲ್ಲಿತ್ತು ಎಂದು ಹೇಳಿದ್ದಾರೆ.
ಪಾಟ್ನಾ, ಅಕ್ಟೋಬರ್ 30: ಬಿಹಾರದ (Bihar) ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ರಿ ದೇವಿ ಅವರ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಅವರಿಬ್ಬರನ್ನು ಭ್ರಷ್ಟ ನಾಯಕರು ಎಂದು ಕರೆದಿದ್ದಾರೆ. ಬಿಹಾರದ ವಿಧಾನಸಭಾ ಚುನಾವಣೆಗೂ ಮುನ್ನ ಇಂದು ಲಖಿಸರೈನಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ 2005ಕ್ಕಿಂತ ಮೊದಲು ಇಡೀ ಬಿಹಾರವು ಜಂಗಲ್ ರಾಜ್ಯದ ಹಿಡಿತದಲ್ಲಿತ್ತು ಎಂದು ಹೇಳಿದ್ದಾರೆ.
ಆರ್‌ಜೆಡಿಯನ್ನು ಟೀಕಿಸಿದ ಅಮಿತ್ ಶಾ, “ಲಾಲು ಪ್ರಸಾದ್ ಮತ್ತು ರಾಬ್ರಿ ದೇವಿ ಹಗರಣಗಳ ಮೂಲಕ ಬಿಹಾರವನ್ನು ಲೂಟಿ ಮಾಡಿದರು. ಕಾಂಗ್ರೆಸ್ನ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸ್ವತಃ ತನ್ನ 10 ವರ್ಷಗಳ ಆಳ್ವಿಕೆಯಲ್ಲಿ 12 ಲಕ್ಷ ಕೋಟಿ ಮೌಲ್ಯದ ಹಗರಣಗಳನ್ನು ಮಾಡಿದೆ. ಲಾಲು-ರಾಬ್ರಿ ಅಥವಾ ಕಾಂಗ್ರೆಸ್ ಬಿಹಾರಕ್ಕೆ ಸಮೃದ್ಧಿಯನ್ನು ತರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ