ಲಕ್ಷಾಂತರ ರೂ ವಿದ್ಯುತ್ ಬಿಲ್ ಬಾಕಿ: 5 ಸರ್ಕಾರಿ ಕಚೇರಿಗಳ ಪವರ್ ಕಟ್, ಕತ್ತಲ್ಲೇ ಕುಳಿತ ಸಿಬ್ಬಂದಿ
ಉತ್ತರ ಕನ್ನಡ ಜಿಲ್ಲೆಯಲ್ಲಿ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಸರ್ಕಾರಿ ಕಚೇರಿಗಳಿಗೆ ಹೆಸ್ಕಾಂ ಶಾಕ್ ನೀಡಿದೆ. ಕಾರವಾರ ತಹಶೀಲ್ದಾರ್ ಕಚೇರಿ ಸೇರಿ ಐದು ಪ್ರಮುಖ ಕಚೇರಿಗಳ ವಿದ್ಯುತ್ ಕಡಿತಗೊಳಿಸಲಾಗಿದೆ. ಲಕ್ಷಾಂತರ ರೂ. ಬಿಲ್ ಪಾವತಿಸದ ಕಾರಣ ಸಿಬ್ಬಂದಿ ಕತ್ತಲಲ್ಲೇ ಕಾರ್ಯನಿರ್ವಹಿಸುವಂತಾಗಿದೆ. ವಿಡಿಯೋ ನೋಡಿ.
ಕಾರವಾರ, ಅಕ್ಟೋಬರ್ 30: ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ 5 ಸರ್ಕಾರಿ ಕಚೇರಿಗಳ ಪವರ್ ಕಟ್ (Power Cut) ಮಾಡಲಾಗಿದೆ. ಕಳೆದ ಏಳು ತಿಂಗಳಿನಿಂದ ಒಂದೊಂದು ಕಚೇರಿಯ ಬಾಕಿ ಬಿಲ್ ಲಕ್ಷಾಂತರ ರೂ ಇದೆ. ಎಷ್ಟೇ ನೋಟಿಸ್ ಕೊಟ್ಟರೂ ಬಿಲ್ ಪಾವತಿ ಮಾಡದ ಹಿನ್ನೆಲೆ ಪವರ್ ಕಟ್ ಮಾಡಲಾಗಿದೆ. ಪವರ್ ಇಲ್ಲದೆ ಕತ್ತಲಲ್ಲೇ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
