ಒಂದೇ ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್ ಸೇರಿದಂತೆ 10 ವಿಕೆಟ್ ಪಡೆದ ಯುವ ಸ್ಪಿನ್ನರ್
U19 Cooch Behar Trophy: ಈ ಸೀಸನ್ನಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ಬಿಹಾರ ಪರ ಸುಮನ್ ಕುಮಾರ್ 23 ವಿಕೆಟ್ ಪಡೆದಿದ್ದಾರೆ ಮತ್ತು ಕೂಚ್ ಬೆಹಾರ್ ಟ್ರೋಫಿ ಋತುವಿನಲ್ಲಿ ವಿಕೆಟ್ ಟೇಕಿಂಗ್ ಬೌಲರ್‌ಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ಇದೀಗ ಸುಮನ್, ರಾಜಸ್ಥಾನ ವಿರುದ್ಧದ ಕೂಚ್ ಬೆಹಾರ್ ಟ್ರೋಫಿ ಪಂದ್ಯದಲ್ಲಿ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದು, ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
ಬಿಹಾರ ತಂಡದ ಯುವ ಸ್ಪಿನ್ನರ್ ಸುಮನ್ ಕುಮಾರ್, ರಾಜಸ್ಥಾನ ವಿರುದ್ಧದ ಅಂಡರ್-19 ಕೂಚ್ ಬೆಹಾರ್ ಟ್ರೋಫಿ ಪಂದ್ಯದಲ್ಲಿ ಅದ್ಭುತ ಬೌಲಿಂಗ್ ಮಾಡುವ ಮೂಲಕ ಹ್ಯಾಟ್ರಿಕ್ ವಿಕೆಟ್ನೊಂದಿಗೆ ಇನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಎಡಗೈ ಸ್ಪಿನ್ನರ್ ಸುಮನ್ ಕುಮಾರ್ ರಾಜಸ್ಥಾನ ವಿರುದ್ಧ 33.5 ಓವರ್‌ಗಳಲ್ಲಿ 53 ರನ್ ನೀಡಿ ಎದುರಾಳಿ ತಂಡದ ಎಲ್ಲಾ 10 ವಿಕೆಟ್‌ಗಳನ್ನು ಉರುಳಿಸಿದರು. ಇದರ ಜೊತೆಗೆ 20 ಮೇಡನ್ ಓವರ್‌ಗಳನ್ನು ಬೌಲ್ ಮಾಡಿದರು. ಅವರ ಮಾರಕ ಬೌಲಿಂಗ್‌ನ ಆಧಾರದ ಮೇಲೆ, ಬಿಹಾರ ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ ಆಧಾರದ ಮೇಲೆ ಬಿಹಾರ ತಂಡವೂ 3 ಅಂಕ ಗಳಿಸಿದೆ.
ಒಂದೇ ಇನ್ನಿಂಗ್ಸ್‌ನಲ್ಲಿ 10 ವಿಕೆಟ್
ಈ ಪಂದ್ಯದಲ್ಲಿ ಬಿಹಾರದ ಬ್ಯಾಟ್ಸ್‌ಮನ್‌ಗಳಾದ ದೀಪೇಶ್ ಗುಪ್ತಾ (ಅಜೇಯ 183) ಮತ್ತು ಪೃಥ್ವಿ ರಾಜ್ (128) ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದು, ತಂಡ 467 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ರಾಜಸ್ಥಾನ ತಂಡ 187 ರನ್‌ಗಳಿಗೆ ಕುಸಿಯಿತು. ಬಿಹಾರದ ಮಾರಕ ದಾಳಿ ನಡೆಸಿದ ಸುಮನ್ ಕುಮಾರ್, 36ನೇ ಓವರ್‌ನ 4,5 ಮತ್ತು 6ನೇ ಎಸೆತದಲ್ಲಿ ಸತತ ಮೂರು ವಿಕೆಟ್ ಪಡೆಯುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು. ಪ್ರಸಕ್ತ ದೇಶೀಯ ಋತುವಿನಲ್ಲಿ ಇದು ಎರಡನೇ 10 ವಿಕೆಟ್ ಸಾಧನೆಯಾಗಿದೆ. ಇದಕ್ಕೂ ಮೊದಲು, ಹರಿಯಾಣದ ವೇಗದ ಬೌಲರ್ ಅನ್ಶುಲ್ ಕಾಂಬೋಜ್ ಇತ್ತೀಚೆಗೆ ರಣಜಿ ಟ್ರೋಫಿಯ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಪಡೆದ ಮೂರನೇ ಬೌಲರ್ ಎನಿಸಿಕೊಂಡಿದ್ದರು.
ಈ ಸೀಸನ್ನಲ್ಲಿ ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ ಬಿಹಾರ ಪರ ಸುಮನ್ ಕುಮಾರ್ 23 ವಿಕೆಟ್ ಪಡೆದಿದ್ದಾರೆ ಮತ್ತು ಕೂಚ್ ಬೆಹಾರ್ ಟ್ರೋಫಿ ಋತುವಿನಲ್ಲಿ ವಿಕೆಟ್ ಟೇಕಿಂಗ್ ಬೌಲರ್‌ಗಳ ಪಟ್ಟಿಯಲ್ಲಿ 10 ನೇ ಸ್ಥಾನದಲ್ಲಿದ್ದಾರೆ. ಇದೀಗ ಸುಮನ್, ರಾಜಸ್ಥಾನ ವಿರುದ್ಧದ ಕೂಚ್ ಬೆಹಾರ್ ಟ್ರೋಫಿ ಪಂದ್ಯದಲ್ಲಿ ಇನ್ನಿಂಗ್ಸ್‌ನಲ್ಲಿ ಎಲ್ಲಾ 10 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದು, ದಾಖಲೆಯ ಪುಸ್ತಕದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.