ಆನೇಕಲ್​​ ಬಳಿ ಭೀಕರ ಬೈಕ್​​ ಅಪಘಾತ: ಎದೆ ಝಲ್​​ ಎನಿಸುವಂತಿದೆ ದೃಶ್ಯ

Updated By: ಪ್ರಸನ್ನ ಹೆಗಡೆ

Updated on: Dec 11, 2025 | 7:13 PM

ಭೀಕರ ಬೈಕ್​​ ಅಪಘಾತದಲ್ಲಿ ಬೈಕ್​​ ಸವಾರ ಸಾವನ್ನಪ್ಪಿರುವ ಘಟನೆ ಆನೇಕಲ್-ಚಂದಾಪುರ ಮುಖ್ಯರಸ್ತೆಯ ಆವಡದೇನಹಳ್ಳಿ ಗೇಟ್ ಬಳಿ ನಡೆದಿದೆ. ಅಡ್ಡಬಂದ ಸೈಕಲ್ ಸವಾರನ ತಪ್ಪಿಸಲು ಹೋದ ಪರಿಣಾಮ ಬೈಕ್​​ ಡಿವೈಡರ್​​ಗೆ ಗುದ್ದಿ ಪಲ್ಟಿಯಾಗಿದೆ. ಗಂಭೀರ ಗಾಯಗೊಂಡಿದ್ದ ಬೈಕ್​​ ಸವಾರನನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಅದಾಗಲೇ ಆತ ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ.

ಆನೇಕಲ್, ಡಿಸೆಂಬರ್​​ 11: ಅಡ್ಡಬಂದ ಸೈಕಲ್ ಸವಾರನ ತಪ್ಪಿಸಲು ಹೋಗಿ ಡಿವೈಡರ್​​ಗೆ ಬೈಕ್ ಡಿಕ್ಕಿಯಾಗಿ ಸವಾರ ಸಾವನ್ನಪ್ಪಿರುವ ಘಟನೆ ಆನೇಕಲ್-ಚಂದಾಪುರ ಮುಖ್ಯರಸ್ತೆಯ ಆವಡದೇನಹಳ್ಳಿ ಗೇಟ್ ಬಳಿ ನಡೆದಿದೆ. ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಅಬ್ದುಲ್ ಸತ್ತಾರ್(26) ಮೃತ ಬೈಕ್ ಸವಾರನಾಗಿದ್ದು, ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಅದಾಗಲೇ ಅವರು ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಭಿಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.