ಬಳ್ಳಾರಿ: ಮನೆ ಮುಂದೆ ಪಾರ್ಕ್ ಮಾಡಿದ್ದ ಬೈಕನ್ನು ವಾಹನಗಳ್ಳ ಕೇವಲ ಒಂದು ನಿಮಿಷದಲ್ಲಿ ಕದ್ದೊಯ್ದ!
ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಬೈಕ್ ಮಾಲೀಕನಿಗೆ ವಾಹನವನ್ನು ಪಾರ್ಕ್ ಮಾಡಲು ಮನೆಯ ಕಂಪೌಂಡ್ ನೊಳಗೆ ಬೇಕಾದಷ್ಟು ಸ್ಥಳವಿದೆ, ಅದರೂ ಅದನ್ನು ಹೊರಗಡೆ ನಿಲ್ಲಿಸಿದ್ದಾರೆ. ಮಾಡಿದ ತಪ್ಪಿಗೆ ಪಶ್ಚಾತ್ತಾಪ ಅನುಭವಿಸುತ್ತಿರಬೇಕು.
ಬಳ್ಳಾರಿ: ನಗರದ ಬಡಾವಣೆಯೊಂದರಲ್ಲಿ ಮನೆ ಮುಂದೆ ಪಾರ್ಕ್ ಮಾಡಿದ್ದ ಬೈಕೊಂದನ್ನು ಈ ಕಳ್ಳ (bike lifter) ಆರಾಮಾಗಿ ತೆಗೆದುಕೊಂಡು ಹೋಗುವುದನ್ನು ನೋಡಿದರೆ ಕಳ್ಳತನ (burglary) ಇಷ್ಟು ಸುಲಭವೇ ಅನಿಸದಿರದು. ಸಿಸಿಟಿವಿ ಯಲ್ಲಿ ಸೆರೆಯಾಗಿರುವ ದೃಶ್ಯದ ಬಲತುದಿಯನ್ನು ಗಮನಿಸಿ, ನಿನ್ನೆ ಅಂದರೆ ಸೋಮವಾರ ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬ (Makara Sankranti) ಅಚರಿಸಿದ ರಾತ್ರಿ ಬೈಕ್ ಲಿಫ್ಟರ್ ತನ್ನ ಕೈಚಳಕ ಪ್ರದರ್ಶಿಸಿದ್ದಾನೆ. ಸಮಯ ನೋಡಿ ಎಷ್ಟಾಗಿದೆ ಅಂತ, ರಾತ್ರಿಯ ಕೇವಲ 11.30 ಮಾರಾಯ್ರೇ! ಬಳ್ಳಾರಿಯಲ್ಲಿ ಜನ ಅಷ್ಟು ಬೇಗ ಮಲಗಿಬಿಡುತ್ತಾರೆಯೇ? ಹಬ್ಬದೂಟ ಸವಿದು ಬೇಗ ಮಲಗಿರುವ ಸಾಧ್ಯತೆಯೂ ಇದೆ. ಕಳ್ಳನ ಕೈಚಳಕ ನೋಡಿ, ತನ್ನ ಕಸುಬಿನಲ್ಲಿ ಅವನು ನಿಸ್ಸಂದೇಹವಾಗಿ ಪರಿಣಿತ. ಕೇವಲ ಒಂದು ನಿಮಿಷದಲ್ಲಿ ನಕಲಿ ಕೀಯಿಂದ ಬೈಕಿನ ಹ್ಯಾಂಡಲ್ ಅನ್ಲಾಕ್ ಮಾಡಿ ಅದನ್ನು ತಳ್ಳಿಕೊಂಡು ಹೋಗುತ್ತಾನೆ! ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಬೈಕ್ ಮಾಲೀಕನಿಗೆ ವಾಹನವನ್ನು ಪಾರ್ಕ್ ಮಾಡಲು ಮನೆಯ ಕಂಪೌಂಡ್ ನೊಳಗೆ ಬೇಕಾದಷ್ಟು ಸ್ಥಳವಿದೆ, ಅದರೂ ಅದನ್ನು ಹೊರಗಡೆ ನಿಲ್ಲಿಸಿದ್ದಾರೆ. ಮಾಡಿದ ತಪ್ಪಿಗೆ ಪಶ್ಚಾತ್ತಾಪ ಅನುಭವಿಸುತ್ತಿರಬೇಕು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ