ಮಳೆಯಿಂದ ತೊಂದರೆಗೊಳಗಾದವರಿಗೆ ಸಮರ್ಪಕವಾಗಿ ನೆರವು ವಿತರಿಸುವಂತೆ ಅಧಿಕಾರಿಗಳಿಗೆ ಬೀಳಗಿ ಶಾಸಕ ತರಾಟೆ

|

Updated on: May 25, 2024 | 7:35 PM

ಯಾವುದೇ ಸಂತ್ರಸ್ತನಿಗೆ ಅನ್ಯಾಯವಾಗಕೂಡದು, ಸಹಾಯ ಧನವನ್ನು ಸರ್ಕಾರ ನೀಡುತ್ತಿದೆ, ನಿಮ್ಮ ಸಂಬಳದಿಂದ ಅಲ್ಲ, ಹಾಗಾಗಿ ಸರ್ಕಾರ ಮಂಜೂರು ಮಾಡಿರುವ ನೆರವನ್ನು ತೊಂದರೆಗೀಡಾಗಿರುವವರಿಗೆ ಪ್ರಾಮಾಣಿಕವಾಗಿ ತಲುಪಿಸಬೇಕು ಎಂದು ಪಾಟೀಲ್ ತಾಕೀತು ಮಾಡಿದರು.

ಬಾಗಲಕೋಟೆ: ನಮ್ಮ ಶಾಸಕರೆಲ್ಲ ಬೀಳಗಿಯ ಕಾಂಗ್ರೆಸ್ ಶಾಸಕ ಜೆಟಿ ಪಾಟೀಲ್ (JT Patil) ಅವರಂಥ ಮನಸ್ಥಿತಿ ಮತ್ತು ಧೋರಣೆ ಹೊಂದಿದ್ದರೆ ಸಂತ್ರಸ್ತರಿಗೆ (victims) ಸರ್ಕಾರದದಿಂದ ಸಿಗುವ ನೆರವು ಯಾವುದೇ ಸಮಸ್ಯೆಯಿಲ್ಲದೆ ಸಿಗುತ್ತದೆ. ಜಿಲ್ಲೆಯ ತುಳಸಿಗೇರಿ, ಸೋಕನಾದಗಿ, ದೇವನಾಳ, ಕೆರಕಲಮಟ್ಟಿ, ಹಿರೇಶೇಲ್ಲಿಕೇರಿ ಗ್ರಾಮಗಳಲ್ಲಿ ಗಾಳಿ ಮಳೆಗೆ ಛಾವಣಿ ಹಾರಿಹೋಗಿವೆ ಮರಗಳು ಉರುಳಿ ಬಿದ್ದಿವೆ ಮತ್ತು ಕಬ್ಬು ಬೆಳೆ ನಾಶವಾಗಿದೆ. ಜನರಿಗಾದ ಹಾನಿಯನ್ನು ಸಮೀಕ್ಷೆ ನಡೆಸುತ್ತಿದ್ದ ಅಧಿಕಾರಿಗಳಿಂದ ಎಡವಟ್ಟಾಗುತ್ತಿರುವ ವದಂತಿ ಕಿವಿಗೆ ಬಿದ್ದಾಕ್ಷಣ ತಾಲ್ಲೂಕು ಕಚೇರಿಯಲ್ಲಿ ಅವರನ್ನು ಭೇಟಿಯಾದ ಪಾಟೀಲ್ ಯಾವುದೇ ಸಂತ್ರಸ್ತನಿಗೆ ಅನ್ಯಾಯವಾಗಕೂಡದು, ಸಹಾಯ ಧನವನ್ನು ಸರ್ಕಾರ ನೀಡುತ್ತಿದೆ, ನಿಮ್ಮ ಸಂಬಳದಿಂದ ಅಲ್ಲ, ಹಾಗಾಗಿ ಸರ್ಕಾರ ಮಂಜೂರು ಮಾಡಿರುವ ನೆರವನ್ನು ತೊಂದರೆಗೀಡಾಗಿರುವವರಿಗೆ ಪ್ರಾಮಾಣಿಕವಾಗಿ ತಲುಪಿಸಬೇಕು ಎಂದು ತಾಕೀತು ಮಾಡಿದರು. ಅವರು ಮಾತಾಡುವುದು ಸ್ಪಷ್ಟವಾಗಿ ಕೇಳಿಸುವುದಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನಿನ್ನೆ ಸುರಿದ ಗಾಳಿ ಮಳೆಗೆ ಪಕ್ಕದ ಮನೆಯ ಗೋಡೆ ಮತ್ತು ಮೇಲ್ಛಾವಣಿ ಕುಸಿತ; ಗಂಭೀರವಾಗಿ ಗಾಯಗೊಂಡ ಮನೆ ಯಜಮಾನ

Follow us on