ನಿನ್ನೆ ಸುರಿದ ಗಾಳಿ ಮಳೆಗೆ ಪಕ್ಕದ ಮನೆಯ ಗೋಡೆ ಮತ್ತು ಮೇಲ್ಛಾವಣಿ ಕುಸಿತ; ಗಂಭೀರವಾಗಿ ಗಾಯಗೊಂಡ ಮನೆ ಯಜಮಾನ
ಗಾಂಜಾ ಮತ್ತಿನಲ್ಲಿ ವ್ಯಕ್ತಿಗೆ ಥಳಿಸಿದ ಇಬ್ಬರು ರೌಡಿಶೀಟರ್ಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ವೆಲೆನ್ಸಿಯಾ ಜಂಕ್ಷನ್ ಬಳಿ ನಿನ್ನೆ ಸಂಜೆ 6.30 ಕ್ಕೆ ಘಟನೆ ನಡೆದಿದೆ. ಸಾರ್ವಜನಿಕರ ಸಹಕಾರದಿಂದ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಬೆಳಗಾವಿ: ನಿನ್ನೆ ಸುರಿದ ಗಾಳಿ ಮಳೆಗೆ ಪಕ್ಕದ ಮನೆಯ ಗೋಡೆ (wall) ಮತ್ತು ಮೇಲ್ಛಾವಣಿ ಕುಸಿದು ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿಗ ಸೂತಕ ಛಾಯೆ ಆವರಿಸಿದೆ. ಜಿಲ್ಲೆಯ ತಾಲೂಕಿನ ಅಲಾರವಾಡ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೇಲ್ಛಾವಣಿ ಕುಸಿತದಿಂದ ಮನೆ ಯಜಮಾನ ಚಂದ್ರಶೇಖರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಏಪ್ರಿಲ್ 15ರಂದು ಮಗಳ ಮದುವೆ ನಿಶ್ಚಿತವಾಗಿದ್ದು, ನಿನ್ನೆ ಸುರಿದ ಮಳೆಯಿಂದ ಮದುವೆಗೆಂದು ತಂದಿದ್ದ ತಿಜೋರಿ ಮೇಲೆ ಗೋಡೆ ಬಿದ್ದಿದೆ. ಬಟ್ಟೆ ಹಾಗೂ ಅಡುಗೆ ಸಾಮಾಗ್ರಿಗಳೆಲ್ಲವೂ ಹಾನಿಗೊಳಗಾಗಿವೆ. ಸಾಲಸೋಲ ಮಾಡಿ ಮದುವೆ ಸಾಮಾಗ್ರಿಗಳನ್ನ ಖರೀದಿ ಮಾಡಿದ್ವಿ. ಎಲ್ಲವೂ ಹಾಳಾಗಿವೆ ಎಂದು ಟಿವಿ9 ಮುಂದೆ ಕಣ್ಣೀರಿಡುತ್ತಾ ಕುಟುಂಬಸ್ಥರು ಅಳಲು ತೋಡಿಕೊಂಡರು.
ಕೌಟುಂಬಿಕ ಕಲಹ ಹಿನ್ನೆಲೆ ಮಾಂಜ್ರಾ ನದಿಗೆ ಜಿಗಿದು ವೃದ್ದ ಆತ್ಮಹತ್ಯೆ:
ಬೀದರ್: ಕೌಟುಂಬಿಕ ಕಲಹ ಹಿನ್ನೆಲೆ ಮಾಂಜ್ರಾ ನದಿಗೆ ಜಿಗಿದು ವೃದ್ದ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಜಿಲ್ಲೆಯ ಔರಾದ್ ತಾಲೂಕಿನ ಹೆಡಗಾಪುರ ಗ್ರಾಮದಲ್ಲಿ ನಡೆದಿದೆ. ಹೆಡಗಾಪುರ ಗ್ರಾಮದ ಕಾಶಿನಾಂಥ (75) ಆತ್ಮಹತ್ಯೆಗೆ ಶರಣಾದ ವೃದ್ದ. ಔರಾದ್ ತಾಲೂಕಿನ ನಿಟ್ಟೂರು ಬಳಿಯ ಮಾಂಜ್ರಾ ನದಿಯಲ್ಲಿ ಶವ ಪತ್ತೆಯಾಗಿದ್ದು, ಠಾಣಾಕುಸನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಗಾಂಜಾ ಮತ್ತಿನಲ್ಲಿ ವ್ಯಕ್ತಿಗೆ ಥಳಿಸಿದ ಇಬ್ಬರು ರೌಡಿಶೀಟರ್ಗಳ ಬಂಧನ:
ಮಂಗಳೂರು: ಗಾಂಜಾ ಮತ್ತಿನಲ್ಲಿ ವ್ಯಕ್ತಿಗೆ ಥಳಿಸಿದ ಇಬ್ಬರು ರೌಡಿಶೀಟರ್ಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ವೆಲೆನ್ಸಿಯಾ ಜಂಕ್ಷನ್ ಬಳಿ ನಿನ್ನೆ ಸಂಜೆ 6.30 ಕ್ಕೆ ಘಟನೆ ನಡೆದಿದೆ. ಪ್ರೀತಂ ಪೂಜಾರಿ, ದೀರಜ್ ಕುಮಾರ್ ರೌಡಿಶೀಟರ್ಗಳು. ಸಾರ್ವಜನಿಕನೊಬ್ಬನಿಗೆ ರೌಡಿಸೀಟರ್ಗಳು ಥಳಿಸಿದ್ದು, ಇದನ್ನ ಅಲ್ಲೇ ಇದ್ದ ಚಿಕನ್ ಅಂಗಡಿ ನೌಕರರು ಪ್ರಶ್ಮಿಸಿದ್ದಾರೆ. ಬಳಿಕ ನೌಕರರಿಗೆ ಹೆಲ್ಮೆಟ್, ಕಲ್ಲಿನಿಂದ ಹಲ್ಲೆ ಮಾಡಲಾಗಿದೆ. ಸಾರ್ವಜನಿಕರಿಗೆ ಚೂರಿಯಿಂದ ಅಟ್ಯಾಕ್ ಮಾಡಲು ಯತ್ನ ಮಾಡಲಾಗಿದೆ. ಬಳಿಕ ಸಾರ್ವಜನಿಕರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರ ಸಹಕಾರದಿಂದ ಪೊಲೀಸರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ.
ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಮಾರಾಟಕ್ಕೆ ಯತ್ನ:
ಬೆಂಗಳೂರು: ವಾಸವಿದ್ದ ಕಟ್ಟಡದ ಮತ್ತೊಬ್ಬರ ಮನೆಯಲ್ಲಿದ್ದ ಚಿನ್ನಾಭರಣ ಕದ್ದು ಮಾರಾಟಕ್ಕೆ ಯತ್ನಿಸುತ್ತಿದ್ದ ಕಳ್ಳ ಅಕ್ರಂ ನಜೀರ್ ಪಾಷಾನನ್ನು ಪೊಲೀಸರು ಬಂಧಿಸಿದ್ದಾರೆ. ಏ.9ರಂದು ಯಾಸ್ಮೀನ್ ಎಂಬಾಕೆಯ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಬೀಗ ಮುರಿದು ಕೈಚಳಕ ತೋರಿದ್ದ ಕಳ್ಳ. ಬಂಧಿತನಿಂದ 9 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಯಾಸ್ಮಿನ್ ದೂರು ದಾಖಲಿಸಿದ್ದಾಳೆ.
ಹೃದಯಘಾತದಿಂದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸಾವು:
ಚಿಕ್ಕಮಗಳೂರು: ಹೃದಯಘಾತದಿಂದ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ನಲ್ಲಿ ನಡೆದಿದೆ. ಬಣಕಲ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಪರಮೇಶ್(50) ಮೃತ ವ್ಯಕ್ತಿ. ಪರಮೇಶ್ಗೆ ಮೂರು ತಿಂಗಳ ಹಿಂದೆ ಪಾರ್ಶ್ವವಾಯು ಬಡಿದಿತ್ತು. ಆ ಬಳಿಕ ಸ್ಟ್ರೋಕ್ನಿಂದ ಚೇತರಿಸಿಕೊಂಡು ಪರಮೇಶ್ ಕೆಲಸ ಮಾಡುತ್ತಿದ್ದರು.
ಇದನ್ನೂ ಓದಿ:
Published On - 4:40 pm, Mon, 11 April 22