Crime News: ಶಿವನೂರ ಗ್ರಾಮದಲ್ಲಿ ಬಂದರು ಬಾಗಿಲು ಕದಿಯುತ್ತಿದ್ದ ಕಳ್ಳನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ಮೈಸೂರು: ಟಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮದ ಬಳಿ ಬೈಕ್ಗೆ ಲಾರಿ ಡಿಕ್ಕಿಯಾಗಿ ಹಸುವಟ್ಟಿ ಗ್ರಾಮದ ಮನು (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕೋಡಿ: ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಶಿವನೂರ ಗ್ರಾಮದಲ್ಲಿ ಕಳೆದ ಎರಡು ವರ್ಷದಿಂದ ಕಳ್ಳರಿಂದ ಹೈರಾಣಾಗಿದ್ದ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಬಂದರು ಬಾಗಿಲು (ಬ್ರಿಡ್ಜ್ ಕಂ ಬ್ಯಾರೇಜ್) ಕದಿಯುತ್ತಿದ್ದ ಖದೀಮರ ಗ್ಯಾಂಗ್ನ 9 ಜನರ ಪೈಕಿ ಓರ್ವ ಕಳ್ಳನನ್ನು ರೈತರು ಹಿಡಿದಿದ್ದಾರೆ. ಹಳ್ಳದ ಬಂದರು ಬಾಗಿಲು ಕದಿಯುತ್ತಿದ್ದ ಮಹಾರಾಷ್ಟ್ರ ಮೂಲದ 9 ಜನ ಕಳ್ಳರ ಪೈಕಿ ಓರ್ವನನ್ನು ಗ್ರಾಮಸ್ಥರು ಹಿಡಿದಿದ್ದು ಇನ್ನೂಳಿದ 8 ಜನ ಪರಾರಿಯಾಗಿದ್ದಾರೆ. ಬಂದರು ಬಾಗಿಲು ಜೊತೆಗೆ ಒಂದು ಪಿಕ್ ಅಪ್ ಗೂಡ್ಸ್ ವಾಹನ ವಶಕ್ಕೆ ಪಡೆಯಲಾಗಿದ್ದು ಕಳ್ಳನಿಗೆ ಧರ್ಮದೇಟು ನೀಡಿ ಅಥಣಿ ಪೋಲಿಸರಿಗೆ ಒಪ್ಪಿಸಲಾಗಿದೆ.
ಸೋಸಲೆ ಬಳಿ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಸಾವು ಮೈಸೂರು: ಟಿ.ನರಸೀಪುರ ತಾಲೂಕಿನ ಸೋಸಲೆ ಗ್ರಾಮದ ಬಳಿ ಬೈಕ್ಗೆ ಲಾರಿ ಡಿಕ್ಕಿಯಾಗಿ ಹಸುವಟ್ಟಿ ಗ್ರಾಮದ ಮನು (25) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ ತುಮಕೂರು: ಶಿರಾ ತಾಲೂಕಿನ ಕರಜೀವನಹಳ್ಳಿ ಬಳಿ ಸುಟ್ಟ ಸ್ಥಿತಿಯಲ್ಲಿ ರಾಜು(36) ಎಂಬುವವರ ಮೃತದೇಹ ಪತ್ತೆಯಾಗಿದೆ. ಪತ್ನಿಯ ಅಕ್ರಮ ಸಂಬಂಧಕ್ಕೆ ರಾಜು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕಳ್ಳಂಬೆಳ್ಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೈಕ್ ಅಪಘಾತ ಯುವಕ ಸಾವು ತುಮಕೂರು: ನಗರದ ಸದಾಶಿವನಗರದಲ್ಲಿ ಮುಂದೆ ಹೋಗುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದು ಬೈಕ್ ಬಳಿಕ ಡಿವೈಡರ್ಗೆ ಡಿಕ್ಕಿಯಾಗಿ ಸವಾರ ಪವನ್(24) ಮೃತಪಟ್ಟಿದ್ದಾನೆ. ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವಾಗ ಸಾವು. ಪವನ್ ಸರಸ್ವತಿ ಪುರದ ನಿವಾಸಿ ಎನ್ನಲಾಗಿದೆ.
ಕಲಬುರಗಿ ನಗರದಲ್ಲಿ ಹೊತ್ತಿ ಉರಿದ ಸೈಕಲ್ ಶಾಪ್ ಕಲಬುರಗಿ ನಗರದಲ್ಲಿ ಬಸವರಾಜ್ ಬಿಲಗುಂದಿ ಎಂಬುವರ ಶಾಪ್ ಬೆಂಕಿಗಾಹುತಿ ಆಗಿದ್ದು ₹15 ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮಗ್ರಿ ಸುಟ್ಟು ಹೋಗಿದೆ. ಶಾರ್ಟ್ಸರ್ಕ್ಯೂಟ್ನಿಂದ ಅವಘಡ ಸಂಭವಿಸಿದ ಸಾಧ್ಯತೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದಾರೆ. ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮೀನು ಹಿಡಿಯಲು ಹೋದ ಒಂದೇ ಕುಟುಂಬದ ಮೂವರು ನೀರುಪಾಲು ತುಮಕೂರು: ಜಿಲ್ಲೆಯ ಒಂದೇ ಕುಟುಂಬದ ಮೂವರು ನೀರುಪಾಲಾಗಿದ್ದಾರೆ. ಆಂಧ್ರಪ್ರದೇಶದ ಪೆರೂರು ಜಲಾಶಯದಲ್ಲಿ ಮೀನು ಹಿಡಿಯಲು ಹೋಗಿ ಮೂವರು ನೀರುಪಾಲಾಗಿದ್ದಾರೆ. ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯ ನಾಗರಾಜ್(45), ಸೋದರ ರಾಮಾಂಜಿ(28), ಪುತ್ರಿ ರಕ್ಷಾ(15) ಮೃತರು. ಗಾಳ ಹಾಕಿ ಮೀನು ಹಿಡಿಯುತ್ತಿದ್ದಾಗ ರಕ್ಷಾ ಕಾಲು ಜಾರಿ ನೀರಿಗೆ ಬಿದ್ದಿದ್ದಾರೆ. ರಕ್ಷಾ ರಕ್ಷಿಸಲು ಹೋಗಿ ನಾಗರಾಜ್ ಹಾಗೂ ರಾಮಾಂಜಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮಂಗಳಮುಖಿಯರಿಂದ ರಾತ್ರಿ ಹೊತ್ತಿನಲ್ಲಿ ದರೋಡೆ ಆರೋಪ ಮಂಗಳಮುಖಿಯರಿಂದ ರಾತ್ರಿ ಹೊತ್ತಿನಲ್ಲಿ ದರೋಡೆ ಮಾಡಲಾಗುತ್ತೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಬೆಂಗಳೂರಿನ ಮಂಜುನಾಥನಗರದ ಬಳಿ ಇರದಂತೆ ಮಂಗಳಮುಖಿಯರಿಗೆ ಸ್ಥಳೀಯರು ಎಚ್ಚರಿಕೆ ನೀಡಿದ್ದು ಮಂಗಳಮುಖಿಯರು ಈ ಬಗ್ಗೆ ಬಾಗಲಗುಂಟೆ ಠಾಣೆಗೆ ದೂರು ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 4 ಪಕ್ಕದಲ್ಲೇ ದಂಧೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಮಂಗಳಮುಖಿಯರು, ಈ ನಡುವೆ ದರೋಡೆಯಲ್ಲಿ ನಿರತರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸದ್ಯ ವಿರೋಧದ ನಡುವೆ ಕೆಲ ಸ್ಥಳೀಯರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರ ವಿರುದ್ಧ ಗಲಾಟೆ ನಡೆದಿದೆ. ಸ್ಥಳೀಯರು ಪೊಲೀಸರಿಗೆ ದಿಕ್ಕಾರ ಕೂಗಿದ್ದಾರೆ. ಗಲಾಟೆ ಹೆಚ್ಚಾದ ಹಿನ್ನಲೆ ಪೊಲೀಸರು ವಶಕ್ಕೆ ತೆಗೆದುಕೊಂಡವರನ್ನ ಬಿಟ್ಟು ಕಳಿಸಿದ್ದಾರೆ.
ಇದನ್ನೂ ಓದಿ: ಜೆಡಿಎಸ್ಗೆ ಬಹುಮತ ಕೊಡಿ, 5 ವರ್ಷದಲ್ಲಿ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನ ಮಾಡುತ್ತೇನೆ; ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ