ರಾಜಣ್ಣ ಬಳಿ ಎಲ್ಲ ಮಾಹಿತಿ ಇರುವಂತಿದೆ, ಎಸ್ಐಟಿ ಅವರನ್ನೇ ಮೊದಲು ತನಿಖೆಗೊಳಪಡಿಸಬೇಕು: ಸಿಟಿ ರವಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ ಡಿ ದೇವೇಗೌಡರೇ ಪ್ರಜ್ವಲ್ ನನ್ನು ವಿದೇಶಕ್ಕೆ ಕಳಿಸಿರುವರೆಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಒಬ್ಬ ಮುಖ್ಯಮಂತ್ರಿಯಾಗಿ ಹುದ್ದೆಯ ಘನತೆಗೆ ತಕ್ಕಂಥ ಮಾತುಗಳನ್ನಾಡಬೇಕು, ಹೀಗೆ ಸಣ್ಣತನದ ಮಾತಾಡಬಾರದು ಎಂದರು.
ಚಿತ್ರದುರ್ಗ: ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ (Prajwal Revanna case) ಕುಮಾರಸ್ವಾಮಿಯೇ ಪಿತಾಮಹ ಎಂದು ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿದ ಹಿರಿಯ ಬಿಜೆಪಿ ನಾಯಕ ಸಿಟಿ ರವಿ (CT Ravi), ತನಿಖೆಗೆ ರಾಜ್ಯ ಸರ್ಕಾರ ವಿನಾಕಾರಣ ಎಸ್ಐಟಿ ರಚಿಸಿದೆ, ಸಚಿವನಿಗೆ ಎಲ್ಲವೂ ಗೊತ್ತಿರುವಂತಿದೆ, ಅವರೇ ತನಿಖೆ ಪೂರ್ಣಗೊಳಿಸಿ ಚಾರ್ಜ್ಶೀಟ್ ಸಲ್ಲಿಸುತ್ತಾರೇನೋ ಎಂದು ವ್ಯಂಗ್ಯವಾಡಿದರು. ರಾಜಣ್ಣ ಬಳಿ ಎಲ್ಲ ಮಾಹಿತಿ ಇರಬಹುದು, ಎಸ್ಐಟಿ ಅಧಿಕಾರಿಗಳು ಮೊದಲು ಅವರನ್ನೇ ತನಿಖೆಗೊಳಪಡಿಸಬೇಕು ಎಂದು ಅವರು ಹೇಳಿದರು. ಪ್ರಕರಣವನ್ನು ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳುವ ಕೆಲಸ ನಡೆಯುತ್ತಿದೆ, ರಾಜಣ್ಣ ಒಬ್ಬ ಸಂಪುಟ ಸಚಿವರ ಮತ್ತು ತನಿಖೆ ಜಾರಿಯಲ್ಲಿರುವಾಗ ಇಂಥ ಹೇಳಿಕೆಗಳು ಸರ್ವಥಾ ಸಲ್ಲದು ಎಂದು ರವಿ ಹೇಳಿದರು. ಪ್ರಕರಣದ ಸುಪ್ರೀಂ ಕೋರ್ಟ್ ಇಲ್ಲವೇ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ನಡೆದರೆ ಸತ್ಯಾಂಶ ಹೊರಬೀಳಲಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಚ್ ಡಿ ದೇವೇಗೌಡರೇ ಪ್ರಜ್ವಲ್ ನನ್ನು ವಿದೇಶಕ್ಕೆ ಕಳಿಸಿರುವರೆಂದು ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಒಬ್ಬ ಮುಖ್ಯಮಂತ್ರಿಯಾಗಿ ಹುದ್ದೆಯ ಘನತೆಗೆ ತಕ್ಕಂಥ ಮಾತುಗಳನ್ನಾಡಬೇಕು, ಹೀಗೆ ಸಣ್ಣತನದ ಮಾತಾಡಬಾರದು ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಬಾಂಬ್ ಇಟ್ಟವರು, ಯುವತಿಯನ್ನು ಸಾಯಿಸಿದವರು ಡಿಕೆ ಸಹೋದರರಿಗೆ ಎಮೋಶನಲ್ ಸಹೋದರರು: ಸಿಟಿ ರವಿ
ಕಳ್ಳ ಬೇಟೆ ತಡೆ ಶಿಬಿರ ಧ್ವಂಸ:ಶೂಟೌಟ್ ಕೇಸಿನ ಗ್ರೌಂಡ್ ರಿಪೋರ್ಟ್
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
