ಭ್ರಷ್ಟಾಚಾರ ವಿವರಿಸುವ ವಿಡಿಯೋಗಳನ್ನು ಬಿಡುಗಡೆ ಮಾಡಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಪರಸ್ಪರ ಆರೋಪಗಳನ್ನು ಮಾಡುತ್ತಿದ್ದಾರೆ!
ಕಾಂಗ್ರೆಸ್ ಬಿಡುಗಡೆ ಮಾಡಿದ ಪೇಸಿಎಮ್ ವಿಡಿಯೋಗೆ ಪ್ರತಿಯಾಗಿ ಬಿಜೆಪಿ ತೊಗರಿ ತಿಪ್ಪಾ ಅಂತ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಮೇಲೆ ವಿಡಿಯೋ ತಯಾರಿಸಿ ಬಿಡುಗಡೆ ಮಾಡಿದ್ದಾರೆ.
ಬೆಂಗಳೂರು: ಸದನದಲ್ಲಿ ಪರಸ್ಪರ ಕೆಸರೆರಚಾಟ ನಡೆಸಿದ್ದು ಆಯ್ತು, ಸಾರ್ವಜನಿಕವಾಗಿ ದೋಷಾರೋಪಣೆ ನಡೆಸಿದ್ದಾಯ್ತು, ನಾವು ಹೆಚ್ಚು ನೀವು ಕಮ್ಮಿ ಅಂತ ದೊಡ್ಡ ದೊಡ್ಡ ಸಮಾವೇಶಗಳನ್ನು ನಡೆಸಿದ್ದಾಯ್ತು, ನೀನು ಭ್ರಷ್ಟ, ನೀನು ನನಗಿಂತ ಭ್ರಷ್ಟ ಅಂತ ಡಂಗುರ ಬಾರಿಸಿದ್ದೂ ಆಯ್ತು-ಈಗ ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ಪಕ್ಷಗಳ ನಾಯಕರು ಭ್ರಷ್ಟಾಚಾರದ ವಿಡಿಯೋಗಳನ್ನು ಬಿಡುಗಡೆ ಮಾಡಿ ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಆರಂಭಿಸಿದ್ದಾರೆ. ಕಾಂಗ್ರೆಸ್ ಬಿಡುಗಡೆ ಮಾಡಿದ ಪೇಸಿಎಮ್ ವಿಡಿಯೋಗೆ ಪ್ರತಿಯಾಗಿ ಬಿಜೆಪಿ ತೊಗರಿ ತಿಪ್ಪಾ (Togari Tippa) ಅಂತ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಮೇಲೆ ವಿಡಿಯೋ ತಯಾರಿಸಿ ಬಿಡುಗಡೆ ಮಾಡಿದ್ದಾರೆ.