ಚಿಕ್ಕಮಗಳೂರು ರಕ್ಷಿತಾಳ ಹೃದಯವನ್ನು ಇಂದು ಬೆಂಗಳೂರಿಗೆ ಏರ್ಲಿಫ್ಟ್ ಮಾಡಲಾಯಿತು!
ಅದರ ಮುಂದುವರಿದ ಭಾಗವಾಗಿ ಗುರುವಾರ ರಕ್ಷಿತಾಳ ಹೃದಯ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಿಂದ ಬೆಂಗಳೂರಿಗೆ ಏರ್ಲಿಫ್ಟ್ ಮಾಡಲಾಯಿತು.
ಚಿಕ್ಕಮಗಳೂರು: ಮಂಗಳವಾರದಂದು ನಾವು ಚಿಕ್ಕಮಗಳೂರಿನ ಕಾಲೇಜು ವಿದ್ಯಾರ್ಥಿನಿ ರಕ್ಷಿತಾ (Rakshita) (ಸೊಮನಹಳ್ಳಿ ತಾಂಡಾದ ಯುವತಿ) ಬಸ್ಸಿಂದ ಕೆಳಗೆ ಬಿದ್ದು ಮೆದುಳು ನಿಷ್ಕ್ರಿಯಗೊಂಡ (brain-dead) ಬಳಿಕ ಪೋಷಕರು ಆಕೆಯ ಅಂಗಾಂಗಳನ್ನು ದಾನ ಮಾಡಲು ನಿರ್ಣಯಿಸಿದ್ದ ಬಗ್ಗೆ ವರದಿ ಮಾಡಿದ್ದೆವು. ಅದರ ಮುಂದುವರಿದ ಭಾಗವಾಗಿ ಗುರುವಾರ ರಕ್ಷಿತಾಳ ಹೃದಯ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಿಂದ ಬೆಂಗಳೂರಿಗೆ ಏರ್ಲಿಫ್ಟ್ (airlift) ಮಾಡಲಾಯಿತು. ಹೃದಯವನ್ನು ಹೆಲಿಕಾಪ್ಟರ್ ಒಂದರಲ್ಲಿ ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು.
Latest Videos