ವಿಧಾನ ಪರಿಷತ್​ನಲ್ಲಿ ಗದ್ದಲ, ಕುರ್ಚಿಗಳನ್ನು ಹತ್ತಿ ಘೋಷಣೆ ಕೂಗಿದ ಸದಸ್ಯರು!

ಕೆಲ ಸದಸ್ಯರು ಕುರ್ಚಿಗಳ ಮೇಲೆ ಹತ್ತಿ ನಿಂತರು. ಪರಿಷತ್ ನಲ್ಲಿ ಗದ್ದಲಮಯ ವಾತಾವರಣ ಮೂಡುತ್ತಿದ್ದಂತೆಯೇ ಸಭಾಪತಿಗಳು ಕಲಾಪವನ್ನು ಮುಂದೂಡಿದರು.

TV9kannada Web Team

| Edited By: Apurva Kumar Balegere

Sep 22, 2022 | 2:39 PM

ಬೆಂಗಳೂರು: ಸದನದ ಹೊರಗಡೆ ನಡೆಯುವ ಪ್ರತಿಭಟನೆಗಳಲ್ಲಿ ಪ್ರದರ್ಶನಗೊಳ್ಳುವ ಪ್ಲಕಾರ್ಡ್ ಗಳು (placard) ಈಗ ಸದನದೊಳಗೂ ರಾರಾಜಿಸುತ್ತಿವೆ ಮಾರಾಯ್ರೇ. ವಿಧಾನ ಪರಿಷತ್ ನಲ್ಲಿ ಗುರುವಾರ ಆಡಳಿತ ಪಕ್ಷ ಮತ್ತು ಪ್ರತಿಪಕ್ಷದ ನಾಯಕರು ಪ್ಲಕಾರ್ಡ್ ಗಳನ್ನು ಹಿಡಿದು ಪರಸ್ಪರ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದರು. ಸಭಾಪತಿಗಳು (chairman) ರೂಲಿಂಗೊಂದನ್ನು ಓದುತ್ತಿದ್ದಾಗ ಸದಸ್ಯರು ಚೇರ್ (chair) ಹತ್ತಿರಕ್ಕೆ ಹೋಗಿ ಘೋಷಣೆಗಳನ್ನು ಕೂಗಿದರು. ಕೆಲ ಸದಸ್ಯರು ಕುರ್ಚಿಗಳ ಮೇಲೆ ಹತ್ತಿ ನಿಂತರು. ಪರಿಷತ್ ನಲ್ಲಿ ಗದ್ದಲಮಯ ವಾತಾವರಣ ಮೂಡುತ್ತಿದ್ದಂತೆಯೇ ಸಭಾಪತಿಗಳು ಕಲಾಪವನ್ನು ಮುಂದೂಡಿದರು.

Follow us on

Click on your DTH Provider to Add TV9 Kannada