ಮಗು ಮಾರಾಟ ಪ್ರಕರಣ: ಮಾರಾಟವಾಗಿದ್ದ ಮಗು ಕೊನೆಗೂ ತಾಯಿ ಮಡಿಲು ಸೇರಿದ್ದೇ ಬಲು ರೋಚಕ!

ಮಗು ಮಾರಾಟ ಪ್ರಕರಣ: ಮಾರಾಟವಾಗಿದ್ದ ಮಗು ಕೊನೆಗೂ ತಾಯಿ ಮಡಿಲು ಸೇರಿದ್ದೇ ಬಲು ರೋಚಕ!

TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 21, 2022 | 10:48 PM

25 ದಿನದ ಮಗುವನ್ನು  ಹೋಟೆಲ್ ಕಾರ್ಮಿಕ ಬಸವ ಮಾರಾಟ ಮಾಡಿದ್ದ. ಸಹ ಕಾರ್ಮಿಕ ಖಾಸಿಫ್​ ಮೂಲಕ 50 ಸಾವಿರಕ್ಕೆ ಮಾರಾಟ ಮಾಡಲಾಗಿದೆ.

ಚಾಮರಾಜನಗರ: ಜಿಲ್ಲೆಯಲ್ಲಿ 25 ದಿನದ ಮಗು ಮಾರಾಟ ಪ್ರಕರಣ ಸಂಬಂಧ ದೂರು ದಾಖಲಾದ 24 ಗಂಟೆಯೊಳಗೆ ಮಗು ತಾಯಿ ಮಡಿಲು ಸೇರಿದೆ. ಮಗು ರಕ್ಷಿಸಿ ಚಾಮರಾಜನಗರ ಟೌನ್​ ಪೊಲೀಸರು ತಾಯಿಗೆ ಒಪ್ಪಿಸಿದ್ದಾರೆ. 25 ದಿನದ ಮಗುವನ್ನು  ಹೋಟೆಲ್ ಕಾರ್ಮಿಕ ಬಸವ ಮಾರಾಟ ಮಾಡಿದ್ದ. ಸಹ ಕಾರ್ಮಿಕ ಖಾಸಿಫ್​ ಮೂಲಕ 50 ಸಾವಿರಕ್ಕೆ ಮಾರಾಟ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರಿನ ದಂಪತಿಗೆ ಖಾಸಿಫ್ ಮಗು ಕೊಡಿಸಿದ್ದ. ಖಾಸಿಫ್​ನನ್ನು ಬಂಧಿಸಿ ಮಗುವನ್ನು ಖರೀದಿಸಿದ್ದ ದಂಪತಿ ಸಂಪರ್ಕ ಮಾಡಿ ಮಗು ರಕ್ಷಿಸಲಾಗಿದೆ. ಬಡತನ, ಪತ್ನಿಗೆ ಹೃದಯ ಕಾಯಿಲೆ ಹಿನ್ನೆಲೆ ಪತಿ ಸಾಲಮಾಡಿದ್ದು, ಮಗುವನ್ನು ಸಾಕಲಾಗದೆ ಪತ್ನಿ ಒಪ್ಪದಿದ್ದರೂ ಬೆದರಿಕೆ ಹಾಕಿ 50,000 ರೂ.ಗೆ ಬಸವ ಮಾರಿದ್ದ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.