ಎರಡು ವರ್ಷಗಳಿಂದ ಮಗನನ್ನು ನೋಡದೆ ಬದುಕಿದ್ದೂ ಸತ್ತಂತಾಗಿದ್ದೇವೆ: ಶಂಕಿತ ಉಗ್ರ ಮತೀನ್ ತಂದೆ

ಎರಡು ವರ್ಷಗಳಿಂದ ಅವನೆಲ್ಲಿದ್ದಾನೆ ಅಂತ ಗೊತ್ತಾಗದೆ ಪ್ರತಿದಿನ ದುಃಖಿಸುತ್ತಿದ್ದೇವೆ, ನಮ್ಮ ಕಷ್ಟ-ಸಂಕಟ ಆ ದೇವರಿಗೆ ಮಾತ್ರ ಗೊತ್ತು, ಎಂದು ಅವರು ಹೇಳುತ್ತಿದ್ದಾರೆ.

TV9kannada Web Team

| Edited By: Arun Belly

Sep 21, 2022 | 5:29 PM

ಶಿವಮೊಗ್ಗ:  ಟಿವಿ9 ಕನ್ನಡ ವಾಹಿನಿಯ ಶಿವಮೊಗ್ಗ ವರದಿಗಾನೊಂದಿಗೆ ಮಾತಾಡುತ್ತಿರುವ ಇವರು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವನೆಂದು ಹೇಳಲಾಗುತ್ತಿರುವ ಮತೀನ್ (Matheen) ಹೆಸರಿನ ಯುವಕನ ತಂದೆ. ಇವರು ಹೇಳುವ ಪ್ರಕಾರ ಮತೀನ್ 2020 ರಲ್ಲಿ ಇಂಜಿನಿಯರಿಂಗ್ (engineering) ವ್ಯಾಸಂಗ ಮಾಡಲು ಅಂತ ಹೋದವನು ಇದುವರೆಗೆ ನಾಪತ್ತೆಯಾಗಿದ್ದಾನೆ (disappeared). ಎರಡು ವರ್ಷಗಳಿಂದ ಅವನೆಲ್ಲಿದ್ದಾನೆ ಅಂತ ಗೊತ್ತಾಗದೆ ಪ್ರತಿದಿನ ದುಃಖಿಸುತ್ತಿದ್ದೇವೆ, ನಮ್ಮ ಕಷ್ಟ-ಸಂಕಟ ಆ ದೇವರಿಗೆ ಮಾತ್ರ ಗೊತ್ತು, ಎಂದು ಅವರು ಹೇಳುತ್ತಿದ್ದಾರೆ.

Follow us on

Click on your DTH Provider to Add TV9 Kannada