ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಬಹುದಾದ ಸಾಧ್ಯತೆಯನ್ನೇ ರಾಜಣ್ಣ ಕ್ರಾಂತಿ ಎಂದಿರಬಹುದು: ಪಾಟೀಲ್
ಕೆಲವು ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರಲು ಬಹಳ ಕಾತುರಾಗಿದ್ದಾರೆ, ಸೆಪ್ಟಂಬರ್ ನಲ್ಲಿ ಅವರು ಪಕ್ಷಕ್ಕೆ ಬರುವ ಕಾರ್ಯಕ್ರಮ ಇರಬಹುದು, ಅದನ್ನೇ ರಾಜಣ್ಣ ಅವರು ಸೆಪ್ಟಂಬರ್ ಕ್ರಾಂತಿ ಅಂತ ಹೇಳಿರಬಹುದು, ಅಂತ ಪಾಟೀಲ್ ಹೇಳಿದರು. ರಾಜಣ್ಣ ಯಾಕೆ ಹೇಳಿದ್ದಾರೋ ಯಾರಿಗೂ ಗೊತ್ತಿಲ್ಲ, ಎಲ್ಲರೂ ತಮಗೆ ತಿಳಿದಿದ್ದನ್ನು ಹೇಳುತ್ತಿದ್ದಾರೆ ಅಷ್ಟೇ.
ವಿಜಯಪುರ, ಜೂನ್ 27: ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ದೊಡ್ಡೋರು, ಅವರು ಯಾವ ಅರ್ಥದಲ್ಲಿ ಕ್ರಾಂತಿಯ ಮಾತುಗಳ್ನಾಡಿದ್ದಾರೋ ಗೊತ್ತಿಲ್ಲ, ಹಾಗಾಗಿ ಮಾತಿನ ಅರ್ಥವೇನು ಅನ್ನೋದನ್ನು ಅವರನ್ನೇ ಕೇಳೋದು ಒಳಿತು ಎಂದು ಸಚಿವ ಎಂಬಿ ಪಾಟೀಲ್ ಹೇಳಿದರು. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯಕ್ಕಾಗಿ ನಡೆದ ಕ್ರಾಂತಿಯಲ್ಲಿ ಮಾತ್ರ ಪಾಲ್ಗೊಂಡಿದೆ, ಹಾಗಾಗಿ ಆ ಕ್ರಾಂತಿ ಬಿಟ್ಟರೆ ವೇರೆ ಯಾವುದೇ ಕ್ರಾಂತಿಯ ಬಗ್ಗೆ ತನಗೆ ಗೊತ್ತಿಲ್ಲ. ಪಕ್ಷದಲ್ಲಿ, ನಾಯಕರಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಅದನ್ನು ಬಗೆಹರಿಸಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇದ್ದಾರೆ ಹೈಕಮಾಂಡ್ ಇದೆ ಎಂದು ಪಾಟೀಲ್ ಹೇಳಿದರು.
ಇದನ್ನೂ ಓದಿ: ಬೆಂಗಳೂರು-ವಿಜಯಪುರ ರೈಲು ಪ್ರಯಾಣ 15ರಿಂದ 10 ಗಂಟೆಗೆ ಇಳಿಕೆ: ಎಂಬಿ ಪಾಟೀಲ್ ಮಹತ್ವದ ಚರ್ಚೆ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ