ಮುಖ್ಯಮಂತ್ರಿ ಬದಲಾಗುತ್ತಾರೆ ಮತ್ತು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ: ಬಸವರಾಜ ರಾಯರೆಡ್ಡಿ
ಜೋರಾಗಿ ಮಾತಾಡಿದರೆ, ಕೂಗಾಡಿದರೆ ಗುರುತಿಸಲ್ಪಡುತ್ತೇವೆ ಅಂತ ಶಾಸಕರು ಭಾವಿಸಿದ್ದಾರೆ, ನೀವು ಅದನ್ನು ಮಾಡೇ ಉನ್ನತ ಹುದ್ದೆ ಪಡೆದಿದ್ದು ಅಂತ ಪತ್ರಕರ್ತರು ಹೇಳಿದಾಗ, ರಾಯರೆಡ್ಡಿ ಬ್ಯಾಕ್ಪುಟ್ಗೆ ಹೋದರು. ತನ್ನದೇನೂ ಉನ್ನತ ಹುದ್ದೆಯಲ್ಲ ಮತ್ತು ವೈಯಕ್ತಿಕವಾಗಿ ಲಾಭದಾಯಕವೂ ಅಲ್ಲ, ಈ ಕಚೇರಿಯೊಂದು ಸಿಕ್ಕಿದೆ, ಹುದ್ದೆ ತ್ಯಜಿಸುವಂತೆ ಹೇಳಿದರೆ ಖುಷಿಯಿಂದ ನಿರ್ಗಮಿಸುತ್ತೇನೆ ಎಂದು ರಾಯರೆಡ್ಡಿ ಹೇಳಿದರು.
ಬೆಂಗಳೂರು, ಜೂನ್ 27: ನಗರದಲ್ಲಿಂದು ಮಾಧ್ಯಮ ಗೋಷ್ಠಿ ನಡೆಸಿ ಮಾತಾಡಿದ ಮುಖ್ಯಮಂತ್ರಿ ಅರ್ಥಿಕ ಸಲಹೆಗಾರ (CM’s Financial Advisor) ಬಸವರಾಜ ರಾಯರೆಡ್ಡಿ ಮತ್ತೊಮ್ಮೆ ಸಿಎಂ ಬದಲಾವಣೆ ಆಗುತ್ತಾರೆ ಅಂದರು. ಆದರೆ ಅವರು ಹೇಳಿದ್ದು ಸಿದ್ದರಾಮಯ್ಯ ಮಾನಸಿಕವಾಗಿ ಬದಲಾಗಿ ಮತ್ತು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಮುಖ್ಯಮಂತ್ರಿಯಾದವರು ನಿರ್ಭೀತಿಯಿಂದ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಂಡಾಗ ಮಾತ್ರ ಸರ್ಕಾರದ ಆಡಳಿತ ಚೆನ್ನಾಗಿರುತ್ತದೆ, ಸಿದ್ದರಾಮಯ್ಯ ಮಾನಸಿಕವಾಗೇನೂ ಕುಗ್ಗಿಲ್ಲ ಮತ್ತು ಆಡಳಿತ ತೀರ ಹದಗೆಟ್ಟಿಲ್ಲ, ಸಿಎಂ ದುರ್ಬಲಗೊಂಡಿದ್ದಾರೆ ಯಾರೋ 4 ಜನ ಹೇಳಿದ್ದಕ್ಕೆ ಅವರು ವೀಕ್ ಅನಿಸುವ ಸನ್ನಿವೇಶ ಸೃಷ್ಟಿಯಾಗಿದೆ ಎಂದು ರಾಯರೆಡ್ಡಿ ಹೇಳಿದರು.
ಇದನ್ನೂ ಓದಿ: ನಮ್ಮ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಹಾಸು ಹೊಕ್ಕಿದೆ ಎಂದು ಹೇಳಿದ್ದೇನೆ: ಬಸವರಾಜ ರಾಯರೆಡ್ಡಿ, ಶಾಸಕ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ