ಹಾಸನ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಸ್ಪರ್ಧೆ; ಬೆಂಬಲ ನೀಡಿ ಪ್ರಚಾರ ಮಾಡುವುದು ಜೆಡಿಎಸ್ ಪಕ್ಷಕ್ಕೆ ಅನಿವಾರ್ಯ: ಪ್ರೀತಂಗೌಡ, ಬಿಜೆಪಿ ಮಾಜಿ ಶಾಸಕ
ಮೈತ್ರಿ ಬಯಸಿ ಬಿಜೆಪಿ ಮನೆಗೆ ಬಂದವರು ಅವರು, ತಾವು ಕೊಟ್ಟಿದ್ದನ್ನು ತಿನ್ನಬೇಕು ಇಲ್ಲಸಲ್ಲದಕ್ಕೆಲ್ಲ ಬೇಡಿಕೆ ಇಡಬಾರದು ಅಂತ ಪ್ರೀತಂಗೌಡ ನೇರವಾಗಿ ಹೇಳಿದರು. ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಲಿ ಅಂತ ಬಯಸುತ್ತಿರುವವರಲ್ಲಿ ತಾನೂ ಒಬ್ಬ, ಜೆಡಿಎಸ್ ತಮ್ಮ ಮನೆಗೆ ಬಂದಿರೋದ್ರಿಂದ ಕೊಂಚ ಸಹಾಯವಾಗುತ್ತದೆ ಎಂದು ಅವರು ಹೇಳಿದರು.
ಹಾಸನ: ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ನಾಯಕರ ರಾಜಕೀಯ ಬದುಕು ಸುಗಮವಾದಂತೇನೂ ಇಲ್ಲ. ಹಾಸನದ ಮಾಜಿ ಬಿಜೆಪಿ ಶಾಸಕ ಪ್ರೀತಂಗೌಡ (Preetham Gowda) ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಜೆಡಿಎಸ್ ನಾಯಕರಿಗೆ (JDS Leaders) ಮೈತ್ರಿ ಒಪ್ಪಂದದಲ್ಲಿ ಅವರಿಗೆ ಮೀಸಲಾಗಿರುವ ಜಾಗ ತೋರಿಸಿದರು ಅಂತ ಅನಿಸುತ್ತದೆ! ಮೈತ್ರಿ ಬಯಸಿ ಬಿಜೆಪಿ ಮನೆಗೆ ಬಂದವರು ಅವರು, ತಾವು ಕೊಟ್ಟಿದ್ದನ್ನು ತಿನ್ನಬೇಕು ಇಲ್ಲಸಲ್ಲದಕ್ಕೆಲ್ಲ ಬೇಡಿಕೆ ಇಡಬಾರದು ಅಂತ ಅವರು ನೇರವಾಗಿ ಹೇಳಿದರು. ನರೇಂದ್ರ ಮೋದಿಯವರು (PM Narendra Modi) ಮೂರನೇ ಬಾರಿಗೆ ಪ್ರಧಾನ ಮಂತ್ರಿಯಾಗಲಿ ಅಂತ ಬಯಸುತ್ತಿರುವವರಲ್ಲಿ ತಾನೂ ಒಬ್ಬ, ಜೆಡಿಎಸ್ ತಮ್ಮ ಮನೆಗೆ ಬಂದಿರೋದ್ರಿಂದ ಕೊಂಚ ಸಹಾಯವಾಗುತ್ತದೆ ಎಂದು ಹೇಳಿದ ಗೌಡ ಹೇಳಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಬಿಜೆಪಿ (ಎನ್ ಡಿ ಎ) ಅಭ್ಯರ್ಥಿಯೇ ಸ್ಪರ್ಧಿಸೋದು, ಕ್ಷೇತ್ರ ತಮಗೆ ಸಿಗುತ್ತದೆ ಎಂಬ ನಿರೀಕ್ಷೆಯನ್ನು ಜೆಡಿಎಸ್ ಇಟ್ಟುಕೊಳ್ಳೋದು ಬೇಡ, ಬಿಜೆಪಿ-ಜೆಡಿಎಸ್ ಮೈತ್ರಿ ಒಂದು ದೀರ್ಘಾವದಿಯ ಒಪ್ಪಂದವಾಗಿರೋದ್ರಿಂದ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿ ಪ್ರಚಾರ ಮಾಡುವ ಅನಿವಾರ್ಯತೆ ಅವರಿಗಿರುತ್ತದೆ, ಅದನ್ನವರು ಮಾಡಬೇಕು ಅಷ್ಟೇ ಎಂದು ಪ್ರೀತಂಗೌಡ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ