ಆ ಶಾಸಕರಿಂದಲೇ ಅಡ್ಡಮತದಾನ? ಸತ್ಯಶೋಧನಾ ಸಮಿತಿ ವರದಿ ಬಗ್ಗೆ ಸಿಟಿ ರವಿ ಏನಂದ್ರು ನೋಡಿ

Edited By:

Updated on: Jun 24, 2026 | 10:13 AM

ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ಕುರಿತು ಬಿಜೆಪಿ ಎಂಎಲ್ಸಿ ಸಿ.ಟಿ. ರವಿ ಪ್ರತಿಕ್ರಿಯಿಸಿದ್ದಾರೆ. ಮೂವರು ಸದಸ್ಯರ ತಂಡ ಮಧ್ಯಂತರ ವರದಿ ಸಿದ್ಧಪಡಿಸಿದೆ. ಇದು ಗೌಪ್ಯವಾಗಿದ್ದು, ರಾಜ್ಯಾಧ್ಯಕ್ಷರು ದೆಹಲಿಯಿಂದ ಮರಳಿದ ನಂತರ ಅವರಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ವರದಿಯ ವಿವರಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ನಿರಾಕರಿಸಿದ್ದಾರೆ.

ಚಿಕ್ಕಮಗಳೂರು, ಜೂನ್ 24: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡಮತದಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಎಲ್ಸಿ, ಸತ್ಯಶೋಧನಾ ಸಮಿತಿಯ ನೇತೃತ್​ವ ವಹಿಸಿರುವ ಸಿಟಿ ರವಿ ಪ್ರಮುಖ ಹೇಳಿಕೆ ನೀಡಿದ್ದಾರೆ. ಮೂವರು ಸದಸ್ಯರ ತಂಡವು ಈ ಕುರಿತು ಮಧ್ಯಂತರ ವರದಿಯನ್ನು ಸಿದ್ಧಪಡಿಸಿದೆ ಎಂದು ಅವರು ತಿಳಿಸಿದ್ದಾರೆ. ಈ ವರದಿಯು ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳನ್ನು ಆಧರಿಸಿದೆ. ವರದಿಯ ಸಿದ್ಧತೆಯ ಸಂದರ್ಭದಲ್ಲಿ ಮೂವರೂ ಒಮ್ಮತಕ್ಕೆ ಬಂದ ಅಂಶಗಳನ್ನು ಮಾತ್ರ ವರದಿಯಲ್ಲಿ ಸೇರಿಸಲಾಗಿದೆ. ಈ ವರದಿಯು ಗೌಪ್ಯ ಸ್ವರೂಪದ್ದಾಗಿದ್ದು, ರಾಜ್ಯಾಧ್ಯಕ್ಷರಿಗೆ ಸಲ್ಲಿಸುವ ಮುನ್ನ ಅದರ ಕುರಿತು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.

ರಾಜ್ಯಾಧ್ಯಕ್ಷರು ಸದ್ಯ ದೆಹಲಿಯಲ್ಲಿದ್ದು, ಅವರು ಮರಳಿ ಬಂದ ನಂತರ ವರದಿಯನ್ನು ಅವರಿಗೆ ಹಸ್ತಾಂತರಿಸಲಾಗುವುದು. ಅಡ್ಡಮತದಾನ ಮಾಡಿದ ಶಾಸಕರ ಬಗ್ಗೆ ನಿರ್ದಿಷ್ಟವಾಗಿ ಆರೋಪ ಮಾಡಲು ಸಾಧ್ಯವಿಲ್ಲವಾದರೂ, ಕೆಲವರ ಮೇಲೆ ಅನುಮಾನಗಳಿವೆ ಎಂದು ಸಿ.ಟಿ. ರವಿ ತಿಳಿಸಿದ್ದಾರೆ. ಈ ಎಲ್ಲಾ ವಿವರಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us