Rahul Gandhi; ಬಿಜೆಪಿಯೊಂದಿಗೆ ಹಣ ಮತ್ತು ಅಧಿಕಾರದ ಬಲವಿತ್ತು, ಕಾಂಗ್ರೆಸ್ ಜೊತೆ ಸತ್ಯ ಮತ್ತು ಜನ ಇದ್ದರು: ರಾಹುಲ್ ಗಾಂಧಿ
ಭ್ರಷ್ಟ ಸರ್ಕಾರದಿಂದ ಬೇಸತ್ತಿದ್ದ ಜನಕ್ಕೆ ಬದಲಾವಣೆ ಬೇಕಿತ್ತು ಹಾಗಾಗೇ ಅವರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರು ಎಂದು ರಾಹುಲ್ ಹೇಳಿದರು
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ, ಉಪ-ಮುಖ್ಯಮಂತ್ರಿ ಮತ್ತು 8 ಸಚಿವರು ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಂಸದ ರಾಹುಲ್ ಗಾಂಧಿ (Rahul Gandhi), ಅವರ ಅದೇ ಕಂಠೀರವ ಕ್ರೀಡಾಂಣದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತಾಡಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಜನತೆಯ ಪ್ರೀತಿ ವಿಶ್ವಾಸವೇ ಕಾರಣ ಎಂದು ಹೇಳಿದರು. ಚುನಾವಣೆಗೆ ಎದುರಿಸುವಾಗ ಬಿಜೆಪಿ (BJP) ಜೊತೆ ಹಣಬಲವಿದ್ದರೆ ಕಾಂಗ್ರೆಸ್ ಪಕ್ಷದ ಜೊತೆ ಸತ್ಯ (truth) ಮತ್ತು ಜನ (people) ಇದ್ದರು. ಭ್ರಷ್ಟ ಸರ್ಕಾರದಿಂದ ಬೇಸತ್ತಿದ್ದ ಜನಕ್ಕೆ ಬದಲಾವಣೆ ಬೇಕಿತ್ತು ಹಾಗಾಗೇ ಅವರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರು. ರಾಜ್ಯದ ಬಡವ-ಬಲ್ಲಿದರು. ಕಾರ್ಮಿಕರು, ಶೋಷಿತರು, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಕಾಂಗ್ರೆಸ್ ಪಕ್ಷದ ಕೈಹಿಡಿದರು ಎಂದು ರಾಹುಲ್ ಹೇಳಿದರು. ಅವರ ಭಾಷಣವನ್ನು ಕನ್ನಡಕ್ಕೆ ಅನುವಾದ ಮಾಡುತ್ತಿದ್ದ ಶರತ್ ಕುಮಾರ್ ಬಚ್ಚೇಗೌಡ ಹಲವಾರು ಬಾರಿ ಎಡವಿದರು. ರಾಹುಲ್ ಹೇಳಿದ್ದೊಂದು ಶರತ್ ಅನುವಾದಿಸಿದ್ದು ಮತ್ತೊಂದು ಆಗತೊಡಗಿತ್ತು!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ