KJ George: ಜನಕ್ಕೆ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಲು ಅಣಿಯಾಗುತ್ತಿರುವುದು ಹೆಚ್ಚು ಸಂತಸ ನೀಡುತ್ತಿದೆ: ಕೆಜೆ ಜಾರ್ಜ್

KJ George: ಜನಕ್ಕೆ ನೀಡಿದ ಭರವಸೆಗಳನ್ನು ಕಾಂಗ್ರೆಸ್ ಸರ್ಕಾರ ಈಡೇರಿಸಲು ಅಣಿಯಾಗುತ್ತಿರುವುದು ಹೆಚ್ಚು ಸಂತಸ ನೀಡುತ್ತಿದೆ: ಕೆಜೆ ಜಾರ್ಜ್

ಅರುಣ್​ ಕುಮಾರ್​ ಬೆಳ್ಳಿ
|

Updated on: May 20, 2023 | 5:00 PM

ತಾನು ಯಾವುದೇ ಖಾತೆಯ ಆಕಾಂಕ್ಷಿಯಲ್ಲ, ಯಾವ ಖಾತೆ ನೀಡಿದರೂ ನಿಭಾಯಿಸುವುದಾಗಿ ಕೆಜೆ ಜಾರ್ಜ್ ಹೇಳಿದರು.

ಬೆಂಗಳೂರು: ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಬಳಿಕ ಖುಷಿಯಿಂದ ಬೀಗುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ ಕೆಜೆ ಜಾರ್ಜ್ (KJ George) ತಾನು ಯಾವುದೇ ಖಾತೆಯ ಆಕಾಂಕ್ಷಿಯಲ್ಲ, ಯಾವ ಖಾತೆ ನೀಡಿದರೂ ನಿಭಾಯಿಸುವುದಾಗಿ ಹೇಳಿದರು. ನಗರದಲ್ಲಿಂದು ಟಿವಿ9 ವರದಿಗಾರನೊಂದಿಗೆ ಮಾತಾಡಿದ ಸಚಿವರು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಚುನಾವಣಾ ಸಮಯದಲ್ಲಿ ನೀಡಿದ ಗ್ಯಾರಂಟಿ ಮತ್ತು ಭರವಸೆಗಳನ್ನು (promises) ಈಡೇರಿಸಲು ಅಣಿಯಾಗುತ್ತಿರುವುದು ಸಚಿವ ಸ್ಥಾನ ಲಭ್ಯವಾಗಿದ್ದಕ್ಕಿಂತ ಹೆಚ್ಚು ಸಂತೋಷವಾಗಿದೆ ಎಂದು ಜಾರ್ಜ್ ಹೇಳಿದರು. ಸಿದ್ದರಾಮಯ್ಯ (Siddaramaiah) ನೇತೃತ್ವದಲ್ಲಿ ಹಿಂದೆ ಕಾಂಗ್ರೆಸ್ ಸರ್ಕಾರ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ನಡೆಸಿತ್ತು, ಈ ಬಾರಿ ಆಗಿನಕ್ಕಿಂತ ಹೆಚ್ಚು ಅಭಿವೃದ್ಧಿಯನ್ನು ನಿರೀಕ್ಷಿಸಬಹುದು ಎಂದು ಸಚಿವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ