Sign In

By signing in or creating an account, you agree with Associated Broadcasting Company's Terms & Conditions and Privacy Policy.

CM Siddaramaiah presser: ಸುದ್ದಿಗೋಷ್ಟಿಯಲ್ಲಿ ಸಿದ್ದರಾಮಯ್ಯ ಆಡಿದ ಮಾತು ಡಿಕೆ ಶಿವಕುಮಾರ್​ರನ್ನು ಮನಸಾರೆ ನಗುವಂತೆ ಮಾಡಿತು!

CM Siddaramaiah presser: ಸುದ್ದಿಗೋಷ್ಟಿಯಲ್ಲಿ ಸಿದ್ದರಾಮಯ್ಯ ಆಡಿದ ಮಾತು ಡಿಕೆ ಶಿವಕುಮಾರ್​ರನ್ನು ಮನಸಾರೆ ನಗುವಂತೆ ಮಾಡಿತು!

ಅರುಣ್​ ಕುಮಾರ್​ ಬೆಳ್ಳಿ
|

Updated on: May 20, 2023 | 5:40 PM

ಮುಖ್ಯಮಂತ್ರಿಗಳು ರೂ. 5,495 ಕೋಟಿ ಅಂತ ಮೇಲಿಂದ ಮೇಲೆ ಹೇಳಿದಾಗ ಶಿವಕುಮಾರ್ ಮತ್ತು ಉಳಿದವರೆಲ್ಲ ನಗುತ್ತಾರೆ.

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರವಹಿಸಿಕೊಂಡ ಸಿದ್ದರಾಮಯ್ಯ (Siddaramaiah) ಸಂಪುಟ ಸಭೆ ನಡೆಸಿದ ಬಳಿಕ ವಿಧಾನಸೌಧದಲ್ಲಿ ಮೊದಲ ಸುದ್ದಿಗೋಷ್ಟಿ ನಡೆಸಿದರು. ಆಧಿಕಾರ ಕೈಗೆ ಬಂದರೂ ಮುಖ್ಯಮಂತ್ರಿಗಳು ಬಿಜೆಪಿ ಸರ್ಕಾರವನ್ನು (BJP government) ಟೀಕಿಸುವುದು ಕಡಿಮೆ ಮಾಡುವ ಸೂಚನೆಗಳು ಕಾಣಿಸುತ್ತಿಲ್ಲ. ಅವರು ಮಾಡಿದ ಒಂದು ಟೀಕೆ ಆಕಳಿಸುತ್ತಿದ್ದ ಉಪ-ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಸೇರಿದಂತೆ ಅಲ್ಲಿ ನೆರೆದವರೆಲ್ಲ ನಕ್ಕರು. 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ರೂ. 5,495 ಕೋಟಿ ಮಂಜೂರು ಮಾಡುವ ಶಿಫಾರಸ್ಸು ಮಾಡಿದ್ದರೂ ಹಿಂದಿನ ಬಿಜೆಪಿ ಸರ್ಕಾರ ದಿವ್ಯ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಪ್ರದರ್ಶಿಸಿದೆ ಅಂತ ಸಿದ್ದರಾಮಯ್ಯ ಹೇಳಿದಾಗ ಪತ್ರಕರ್ತರೊಬ್ಬರು ಎಷ್ಟು ಕೋಟಿ ಸಾರ್ ಅಂತ ಕೇಳುತ್ತಾರೆ, ಅದಕ್ಕೆ ಮುಖ್ಯಮಂತ್ರಿಗಳು ರೂ. 5,495 ಕೋಟಿ ಅಂತ ಮೇಲಿಂದ ಮೇಲೆ ಹೇಳುತ್ತಾರೆ. ಆಗಲೇ ಶಿವಕುಮಾರ್ ಮತ್ತು ಉಳಿದವರೆಲ್ಲ ನಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ