ರಾಜ್ಯದ ಆರ್ಥಿಕ ಸ್ಥಿತಿಯನ್ನು ದಿವಾಳಿಯೆಬ್ಬಿಸಿರುವ ಬಿಜೆಪಿ ನಾಯಕರಿಗೆ ನಮ್ಮ ಸರ್ಕಾರದ ಬಗ್ಗೆ ಮಾತಾಡುವ ನೈತಿಕತೆ ಇಲ್ಲ: ಸಿದ್ದರಾಮಯ್ಯ

|

Updated on: Oct 25, 2023 | 2:13 PM

ಆಪರೇಶನ್ ಕಮಲ ಮಾಡಿದಾಗ ತಾವು ಖರೀದಿಸಿದ ಪ್ರತಿ ಶಾಸಕನಿಗೆ ರೂ, 25 ಕೋಟಿ ಕೊಡುವುದರ ಜೊತೆಗೆ ಉಪ ಚುನಾವಣೆಯಲ್ಲಿ ಗೆಲ್ಲಿಸಲು ಎಲ್ಲ ಶಾಸಕರಿಗೆ ತಲಾ 25 ಕೋಟಿ ರೂ.ಯಂತೆ ಖರ್ಚು ಮಾಡಿದರು, ಅವರಿಗೆ ಎಲ್ಲಿಂದ ಬಂತು ಆ ಹಣ ಅಂತ ಕೋಪದಿಂದ ಭುಸುಗುಡುತ್ತಾ ಪ್ರಶ್ನಿಸಿದರು. ಸರ್ಕಾರ ನಡೆಸಿದ ಮೂರೂವರೆ ವರ್ಷಗಳ ಅವಧಿಯಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ಅವರಿಗಾಗಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ಮೈಸೂರು: ರಾಜ್ಯದಲ್ಲಿ ಆಡಳಿತ ನಡಸುತ್ತಿರೋದು ಎಟಿಎಂ ಸರ್ಕಾರ (ATM government) ಎಂದು ಬಿಜೆಪಿ ನಾಯಕರು ಮಾಡುತ್ತಿರುವ ಆರೋಪದ ಬಗ್ಗೆ ಹೇಳಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಕೆಂಡಕಾರಿದರು. ನಗರದಲಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ತಮ್ಮ ಸರ್ಕಾರದ ಬಗ್ಗೆ ಮಾತಾಡಲು ಅವರಿಗೆ ನೈತಿಕ ಹಕ್ಕಿಲ್ಲ, ಮಾನ ಮರ್ಯದೆಯನ್ನು ಬದಿಗಿಟ್ಟು ಬಿಜಪಿ ನಾಯಕರು ಮಾತಾಡುತ್ತಿದ್ದಾರೆ ಎಂದು ಹೇಳಿ ಆಪರೇಶನ್ ಕಮಲ (Operation Lotus) ಮಾಡಿದಾಗ ತಾವು ಖರೀದಿಸಿದ ಪ್ರತಿ ಶಾಸಕನಿಗೆ ರೂ, 25 ಕೋಟಿ ಕೊಡುವುದರ ಜೊತೆಗೆ ಉಪ ಚುನಾವಣೆಯಲ್ಲಿ ಗೆಲ್ಲಿಸಲು ಎಲ್ಲ ಶಾಸಕರಿಗೆ ತಲಾ 25 ಕೋಟಿ ರೂ.ಯಂತೆ ಖರ್ಚು ಮಾಡಿದರು, ಅವರಿಗೆ ಎಲ್ಲಿಂದ ಬಂತು ಆ ಹಣ ಅಂತ ಕೋಪದಿಂದ ಭುಸುಗುಡುತ್ತಾ ಪ್ರಶ್ನಿಸಿದರು. ಸರ್ಕಾರ ನಡೆಸಿದ ಮೂರೂವರೆ ವರ್ಷಗಳ ಅವಧಿಯಲ್ಲಿ ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವುದು ಅವರಿಗಾಗಲಿಲ್ಲ. ಸಾಲಗಳನ್ನು ಮಾಡಿ ರಾಜ್ಯದ ಆರ್ಥಿಕ ಸ್ಥಿತಿಯನ್ನು ದಿವಾಳೆಯೆಬ್ಬಿಸಿ, ಗುತ್ತಿಗೆದಾರರ 30,000 ಕೋಟಿ ರೂ. ಬಿಲ್ ಗಳನ್ನು ಪೆಂಡಿಂಗ್ ಇಟ್ಟುಹೋಗಿದ್ದಾರೆ, ಯಾವ ನೈತಿಕತೆಯೊಂದಿಗೆ ಅವರು ಮಾತಾಡುತ್ತಾರೆ ಎಂದು ಸಿದ್ದರಾಮಯ್ಯ ಕೇಳಿದರು. ಅವರ ಸರ್ಕಾರ ಅಧಿಕಾರಲ್ಲಿದ್ದಾಗಿನ ರಾಜ್ಯದ ಆರ್ಥಿಕ ಸ್ಥಿತಿ ಮತ್ತು ತಮ್ಮ ಸರ್ಕಾರದಲ್ಲಿನ ಆರ್ಥಿಕ ಸ್ಥಿತಿಗಳ ಬಗ್ಗೆ ವಿಧಾನ ಸಭಾ ಅಧಿವೇಶನದಲ್ಲಿ ಶ್ವೇತಪತ್ರ ಬಿಡುಗಡೆ ಮಾಡೋದಾಗಿ ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ