Fire Works: ವಿಜಯದಶಮಿ ವಿಶೇಷ -ಸಾಂಗಲಿ ಗ್ರಾಮದಲ್ಲಿ ಸಿದ್ದರಾಜ ಮಹಾರಾಜ ದೇವರ ಪಲ್ಲಕ್ಕಿ, ಸಿಡಿಮದ್ದು ಜಾತ್ರೆ ವಿಡಿಯೋ ಮಿಸ್ ಮಾಡದೇ ನೋಡಿ
Sangali Fire Works: ಇದಕ್ಕಾಗಿ ಮಹಾರಾಷ್ಟ್ರದ ಶಿವಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕವಟೆ ಏಕಂದ ಗ್ರಾಮದಲ್ಲಿ ಪ್ರತಿ ವರ್ಷ ವಿಜಯದಶಮಿ ದಿನದಂದು ಎರಡು ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಸಿಡಿಮದ್ದು ವ್ಯಾಪಾರ ನಡೆಯುತ್ತದೆ. ಭಾರತದ ನಕಾಶೆ, ಸ್ವಸ್ತಿಕ್, ಸುದರ್ಶನ ಚಕ್ರ ಸೇರಿ ವಿವಿಧ ಮಾದರಿಯ ಸಿಡಿಮದ್ದು ತಯಾರಿಸಿ ಸಿಡಿಸುವ ವಾಡಿಕೆ ಇಲ್ಲಿದೆ.
ವಿಜಯದಶಮಿ ನಿಮಿತ್ತ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ತಾಸ್ಗಾಂವ್ ತಾಲೂಕಿನ ಕವಟೆ ಏಕಂದ ಗ್ರಾಮದಲ್ಲಿ ‘ಸಿಡಿಮದ್ದು ಜಾತ್ರೆ’ (Fire Works) ಅತ್ಯಾಕರ್ಷಕವಾಗಿ ನಡೆಯಿತು. ಕವಟೆ ಏಕಂದ ಗ್ರಾಮದಲ್ಲಿ ಪ್ರತಿ ವರ್ಷ ವಿಜಯದಶಮಿ ದಿನ ಸಿದ್ದರಾಜ ಮಹಾರಾಜ ದೇವರ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಇದೇ ವೇಳೆ ಸಿಡಿಮದ್ದು ಸಿಡಿಸಿ ದೇವರಿಗೆ ಭಕ್ತಿ ಸಮರ್ಪಣೆ ಮಾಡಲಾಗುತ್ತದೆ. ಹರ ಹರ ಎನ್ನುತ್ತ ಸಿಡಿಮುದ್ದು ಸಿಡಿಸಿ ಹುಚ್ಚೆದ್ದು ಕುಣಿಯುತ್ತೆ (Siddharaja Maharaj Sidimaddu Jatra video) ಭಕ್ತ ಸಮೂಹ. ಸಾಂಗಲಿ ಜಿಲ್ಲಾಡಳಿತವು ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಮೂರಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ನಿಯೋಜಿಸಿತ್ತು.
ಇದಕ್ಕಾಗಿ ಮಹಾರಾಷ್ಟ್ರದ ಶಿವಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಕವಟೆ ಏಕಂದ ಗ್ರಾಮದಲ್ಲಿ ಪ್ರತಿ ವರ್ಷ ವಿಜಯದಶಮಿ ದಿನದಂದು ಎರಡು ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಸಿಡಿಮದ್ದು ವ್ಯಾಪಾರ ನಡೆಯುತ್ತದೆ. ಭಾರತದ ನಕಾಶೆ, ಸ್ವಸ್ತಿಕ್, ಸುದರ್ಶನ ಚಕ್ರ ಸೇರಿ ವಿವಿಧ ಮಾದರಿಯ ಸಿಡಿಮದ್ದು ತಯಾರಿಸಿ ಸಿಡಿಸುವ ವಾಡಿಕೆ ಇಲ್ಲಿದೆ. ಸಿಡಿಮದ್ದು ಜಾತ್ರೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗುತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ