ಕುಮಾರಸ್ವಾಮಿ ಜೊತೆ ಯಾವುದೇ ಮಾಧ್ಯಮದಲ್ಲಿ ನೇರಾನೇರ ಚರ್ಚೆಗೆ ಸಿದ್ಧ: ಡಿಕೆ ಶಿವಕುಮಾರ್
ಒಂದೇ ಸಮುದಾಯದವರು, ಕುಮಾರಸ್ವಾಮಿಯನ್ನು ಟೀಕಿಸುವುದು ಬೇಡ ಅಂತ ದೊಡ್ಡವರು, ತಿಳಿದವರು ಹೇಳಿದ್ದರಿಂದ ಸುಮ್ಮನಿರಬೇಕಾಯಿತು, ಅದರೆ ಇನ್ನು ಸುಮ್ಮನಿರಲ್ಲ, ಸ್ವಾಭಿಮಾನವನ್ನು ಕಡೆಗಣಿಸಲಾಗದು, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ; ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಯಾವುದೇ ಮಾಧ್ಯಮದಲ್ಲಿ ನೇರಾನೇರ ಚರ್ಚೆಗೆ ಸಿದ್ಧನಿರುವುದಾಗಿ ಶಿವಕುಮಾರ್ ಹೇಳಿದರು.
ಬೆಂಗಳೂರು: ಇದನ್ನು ನಿರೀಕ್ಷಿಸಲಾಗಿತ್ತು. ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಮಾಡುತ್ತಿರುವ ಎಲ್ಲ ಆರೋಪಗಳಿಗೆ ಉತ್ತರ ನೀಡಲೆಂದೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಇಂದು ಕೆಪಿಸಿಸಿ ಕಚೇರಿಯಲ್ಲಿ (KPCC office) ಸುದ್ದಿಗೋಷ್ಟಿ ನಡೆಸಿದರು. ಸುದ್ದಿಗೋಷ್ಟಿಗಳನ್ನು ನಡೆಸಿ ಮಾತಾಡಿದರೆ ಪ್ರಯೋಜನವಿಲ್ಲ, ಜನ ಮಾತುಗಳನ್ನು ನೆನಪಿಟ್ಟುಕೊಳ್ಳಲ್ಲ, ನಾವಾಡಿದ ಮಾತು, ಮಾಡಿದ ಕೆಲಸಗಳು ಮುಂದಿನ ಪೀಳಿಗೆಗಳಿಗೆ ಗೊತ್ತಾಗಬೇಕು, ಆದಾಗಬೇಕಾದರೆ ವಿಧಾನಸಭಾ ಅಧಿವೇಶನದಲ್ಲಿ ಮಾತಾಡಬೇಕು, ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ತೀರ್ಮಾನ ಆಗಿರುವುದರಿಂದ ಕುಮಾರಸ್ವಾಮಿ ದಾಖಲೆಗಳನ್ನಿಟ್ಟುಕೊಂಡು ಅಧಿವೇಶನದಲ್ಲಿ ಮಾತಾಡಲಿ ಎಂದು ಶಿವಕುಮಾರ್ ಹೇಳಿದರು. ಒಂದೇ ಸಮುದಾಯದವರು, ಕುಮಾರಸ್ವಾಮಿಯನ್ನು ಟೀಕಿಸುವುದು ಬೇಡ ಅಂತ ದೊಡ್ಡವರು, ತಿಳಿದವರು ಹೇಳಿದ್ದರಿಂದ ಸುಮ್ಮನಿರಬೇಕಾಯಿತು, ಅದರೆ ಇನ್ನು ಸುಮ್ಮನಿರಲ್ಲ, ಸ್ವಾಭಿಮಾನವನ್ನು ಕಡೆಗಣಿಸಲಾಗದು, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷನಾಗಿ; ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೊತೆ ಯಾವುದೇ ಮಾಧ್ಯಮದಲ್ಲಿ ನೇರಾನೇರ ಚರ್ಚೆಗೆ ಸಿದ್ಧನಿರುವುದಾಗಿ ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ