Karnataka Assembly Polls; ಬಿಜೆಪಿಗೆ ಮತದಾರನ ಮುಂದೆ ಹೋಗಲು ಮುಖವಿಲ್ಲ, ಹಾಗಾಗಿ ಸ್ಟಾರ್ ಪ್ರಚಾರಕರು ಬೇಕು: ಹೆಚ್ ಡಿ ಕುಮಾರಸ್ವಾಮಿ
ನಟ ಸುದೀಪ ಯಾವುದೇ ಪಕ್ಷ ಸೇರಲಿ ಅಥವಾ ಪ್ರಚಾರ ಮಾಡಲಿ ಅದು ಅವರ ವೈಯಕ್ತಿಕ ವಿಚಾರ, ಅದರ ಬಗ್ಗೆ ಲಘುವಾಗಿ ಮಾತಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಬೆಂಗಳೂರು: ಬಿಜೆಪಿ ಸ್ಟಾರ್ ಪ್ರಚಾರಕ (star campaigners) ಅವಶ್ಯಕತೆಯಿದೆ, ಯಾಕೆಂದರೆ ಯಾವುದೇ ಅಭಿವೃದ್ಧಿ ಕೆಲಸ ನಡೆಸದ ಕಾರಣ ಅವರಿಗೆ ಜನರ ಮುಂದೆ ಹೋಗಲು ಮುಖವಿಲ್ಲ, ಸ್ಟಾರ್ ಪ್ರಚಾರಕರನ್ನು ಮುಂದೆ ಮಾಡಿ ಅವರ ಮೂಲಕ ವೋಟು ಗಿಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಹೇಳಿದರು. ಬೆಂಗಳೂರಲ್ಲಿ ಇಂದು ಪಂಚರತ್ನ ಯಾತ್ರೆ (Pancharatna Yatre) ನಡೆಸುತ್ತ ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿದ ಕುಮಾರಸ್ವಾಮಿ, ತಮ್ಮ ಪಕ್ಷಕ್ಕಾಗಲೀ, ಅಭ್ಯರ್ಥಿಗಳಿಗಾಗಲೀ ಸ್ಟಾರ್ ಪ್ರಚಾರಕರ ಅವಶ್ಯಕತೆಯಿಲ್ಲ, ಪಕ್ಷದ ಕಾರ್ಯಕರ್ತರೇ ತಮ್ಮ ಸ್ಟಾರ್ ಪ್ರಚಾರಕರು ಎಂದು ಹೇಳಿದರು. ನಟ ಸುದೀಪ ಯಾವುದೇ ಪಕ್ಷ ಸೇರಲಿ ಅಥವಾ ಪ್ರಚಾರ ಮಾಡಲಿ ಅದು ಅವರ ವೈಯಕ್ತಿಕ ವಿಚಾರ, ಅದರ ಬಗ್ಗೆ ಲಘುವಾಗಿ ಮಾತಾಡುವುದಿಲ್ಲ ಆದರೆ ಸಿನಿಮಾ ನಟರ ಪ್ರಚಾರದಿಂದ ಮತದಾರ ಪ್ರಭಾವಕ್ಕೊಳಗಾಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ