Karnataka Assembly Polls: ಹೊಸಕೋಟೆಯಲ್ಲಿ ಮಗನ ಗೆಲುವಿಗೆ ಎಮ್ಟಿಬಿ ನಾಗರಾಜ್ ಭಗೀರಥ ಯತ್ನ, ಸಂಸದ ಬಚ್ಚೇಗೌಡರ ಆಪ್ತ ಸಚಿವರ ಬಲೆಗೆ
ಕಳೆದ ಬಾರಿಯ ಉಪಚುನಾವಣೆಯಲ್ಲಿ ಶರತ್ ವಿರುದ್ಧ ಸೋತಿದ್ದ ನಾಗರಾಜ್ ಈ ಬಾರಿ ಮಗನನ್ನು ಗೆಲ್ಲಿಸುವ ಪಣತೊಟ್ಟಂತಿದೆ.
ಹೊಸಕೋಟೆ (ಬೆಂಗಳೂರು ಗ್ರಾಮಾಂತರ): ಕಾಲಚಕ್ರ ಉರುಳುತ್ತದೆ ಅಂತ ಹೇಳ್ತಾರಲ್ಲ, ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಲಚಕ್ರ ಉರುಳಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇದುವರೆಗೆ ಕ್ಷೇತ್ರದಲ್ಲಿ ಚುನಾವಣೆ ಮತ್ತು ರಾಜಕೀಯ ಪ್ರಾಬಲ್ಯಕ್ಕಾಗಿ ಬಿಎನ್ ಬಚ್ಚೇಗೌಡ (BN Bache Gowda) ಮತ್ತು ಎಮ್ ಟಿ ಬಿ ನಾಗರಾಜ್ (MTB Nagaraj) ಕಾದಾಡುತ್ತಿದ್ದರು ಇನ್ನು ಅವರ ಮಕ್ಕಳಾದ ಶರತ್ ಬಚ್ಚೇಗೌಡ (Sharath Bache Gowda) ಮತ್ತು ನೀತಿಶ್ ನಾಗರಾಜ್ ಅದನ್ನು ಮುಂದುವರಿಸಿಕೊಂಡು ಹೋಗಲಿದ್ದಾರೆ. 2023 ವಿಧಾನಸಭಾ ಚುನಾವಣೆಗೆ ಹೊಸಕೋಟೆಯಿಂದ ನಾಗರಾಜ್, ತಮ್ಮ ಮಗನಿಗಾಗಿ ಟಿಕೆಟ್ ಕೇಳಿದ್ದು ಟಿಕೆಟ್ ಘೋಷಣೆಯಾಗುವ ಮೊದಲೇ ಪ್ರಚಾರವನ್ನೂ ಆರಂಭಿಸಿದ್ದಾರೆ. ಕಳೆದ ಬಾರಿಯ ಉಪಚುನಾವಣೆಯಲ್ಲಿ ಶರತ್ ವಿರುದ್ಧ ಸೋತಿದ್ದ ನಾಗರಾಜ್ ಈ ಬಾರಿ ಮಗನನ್ನು ಗೆಲ್ಲಿಸುವ ಪಣತೊಟ್ಟಂತಿದೆ. ಅದರ ಭಾಗವಾಗಿ ಅವರು ಸಂಸದ ಬಚ್ಚೇಗೌಡರ ಆಪ್ತ ಹುಲ್ಲೂರು ಮಂಜುನಾಥ ಅವರನ್ನು ತಮ್ಮೆಡೆ ಸೆಳೆದುಕೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ