ಯಡಿಯೂರಪ್ಪನವರನ್ನು ಬಿಜೆಪಿ ಬಹಳ ಕೆಟ್ಟದಾಗಿ ನಡೆಸಿಕೊಂಡಿದೆ: ಸಿ ಎಮ್ ಇಬ್ರಾಹಿಂ
ಜಿಲ್ಲೆಯಲ್ಲಿ ಜೆಡಿ(ಎಸ್) ಪಕ್ಷದ ಅಸ್ತಿತ್ವವೇ ಇಲ್ಲ ಅನ್ನೋದನ್ನು ಅಲ್ಲಗಳೆದ ಇಬ್ರಾಹಿಂ ಕಾದು ನೋಡಲು ಹೇಳಿದರು.
ಕೊಪ್ಪಳ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರನ್ನು (BS Yediyurappa) ಬಿಜೆಪಿ ಸೇದಿ ಬಿಸಾಕಿದ ಬೀಡಿಯ ಹಾಗೆ ಬಹಳ ಕೆಟ್ಟದಾಗಿ ನಡೆಸಿಕೊಂಡಿದೆ, ಮುಖ್ಯಮಂತ್ರಿಯಾಗಿದ್ದವರನ್ನು ಕಿತ್ತೊಗೆದ ನಂತರ ಸಂಸದೀಯ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಿಕೊಂಡಿರುವುದರಲ್ಲಿ ಯಾವ ಪುರುಷಾರ್ಥ ಅಡಗಿದೆ ಎಂದು ಜೆಡಿ(ಎಸ್) ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ (CM Ibrahim) ಶನಿವಾರ ಕೊಪ್ಪಳದಲ್ಲಿ ಹೇಳಿದರು. ಜಿಲ್ಲೆಯಲ್ಲಿ ಜೆಡಿ(ಎಸ್) ಪಕ್ಷದ ಅಸ್ತಿತ್ವವೇ ಇಲ್ಲ ಅನ್ನೋದನ್ನು ಅಲ್ಲಗಳೆದ ಅವರು ಕಾದು ನೋಡಲು ಹೇಳಿದರು.