Karnataka Assembly Polls: ಜೆಡಿಎಸ್ ಪಕ್ಷ ಸೇರಿರುವ ವ್ಯಕ್ತಿ ನನ್ನ ಅಳಿಯನಲ್ಲ, ಅವನ-ನನ್ನ ನಡುವೆ ಯಾವ ಸಂಬಂಧವೂ ಇಲ್ಲ: ಗೋವಿಂದ ಕಾರಜೋಳ
ಕಾರಜೋಳ ಅವರು ಪಕ್ಷವನ್ನು ರೇಲ್ವೇ ನಿಲ್ದಾಣಕ್ಕೆ ಹೋಲಿಸಿ ಅಲ್ಲಿ ಎಷ್ಟೊಂದು ಜನ ಬರ್ತಾರೆ ಹೋಗ್ತಾರೆ, ಅಂಥವರದ್ದೆಲ್ಲ ಲೆಕ್ಕ ಇಡಲಾಗಲ್ಲ ಎನ್ನುತ್ತಾರೆ.
ಹುಬ್ಬಳ್ಳಿ: ಒಂದು ನಂಬಲರ್ಹ ಮೂಲದ ಪ್ರಕಾರ ಸಚಿವ ಗೋವಿಂದ ಕಾರಜೋಳ (Govind Karjol) ಹತ್ತಿರದ ಸಂಬಂಧಿಯೊಬ್ಬರು ರಾಜಕೀಯವಾಗಿ ಅವರಿಂದ ದೂರವಾಗಿದ್ದಾರೆ. ಅವರ ಅಳಿಯ ಅಂತ ಗುರುತಿಸಿಕೊಂಡಿದ್ದ ವ್ಯಕ್ತಿ ಜೆಡಿಎಸ್ (JDS) ಸೇರಿದ್ದಾರಂತೆ. ಇದು ನಿಜಾನಾ ಸರ್ ಅಂತ ಹುಬ್ಬಳ್ಳಿಯಲ್ಲಿಂದು (Hubballi) ಮಾಧ್ಯಮದ ಪ್ರತಿನಿಧಿಗಳು ಕೇಳಿದಾಗ, ಅವನ್ಯಾರೋ ನನಗೆ ಗೊತ್ತೇ ಅಲ್ಲ, ಅವನು ನನ್ನ ರಕ್ತ ಸಂಬಂಧಿ ಅಲ್ಲ. ನಾನ್ಯಾವತ್ತೂ ಅವನನ್ನು ನನ್ನ ಸಂಬಂಧಿ ಅಂತ ಹೇಳಿಕೊಂಡಿಲ್ಲ ಅಂತ ಆ ವ್ಯಕ್ತಿಯೊಂದಿಗಿನ ಸಂಬಂಧವನ್ನು ಸಾರಾಸಗಟು ತಿರಸ್ಕರಿಸಿದರು. ನಂತರ ಅವರು ಪಕ್ಷವನ್ನು ರೇಲ್ವೇ ನಿಲ್ದಾಣಕ್ಕೆ ಹೋಲಿಸಿ ಅಲ್ಲಿ ಎಷ್ಟೊಂದು ಜನ ಬರ್ತಾರೆ ಹೋಗ್ತಾರೆ, ಅಂಥವರದ್ದೆಲ್ಲ ಲೆಕ್ಕ ಇಡಲಾಗಲ್ಲ ಎನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 03, 2023 06:29 PM
Latest Videos