ವಿಮಾನ ನಿಲ್ದಾಣದಲ್ಲಿ ಶ್ಲೋಕ ಪಠಿಸಿದ ಬಿಜೆಪಿ ನಾಯಕಿ ಮಾಧವಿ ಲತಾ; ವಿವಾದಕ್ಕೀಡಾಯ್ತು ವಿಡಿಯೋ

Updated on: Mar 25, 2026 | 8:25 PM

ಬಿಜೆಪಿ ನಾಯಕಿ ಮಾಧವಿ ಲತಾ ಕೊಂಪೆಲ್ಲಾ ದೇವಿಯ ಶ್ಲೋಕಗಳನ್ನು ಪಠಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಾರ್ಥನಾ ಕೋಣೆಯಲ್ಲಿ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ. ಈ ಕ್ಲಿಪ್‌ನಲ್ಲಿ, ವಿಮಾನ ನಿಲ್ದಾಣದ ಪ್ರಾರ್ಥನಾ ಸ್ಥಳದೊಳಗೆ ಮಾಧವಿ ಲತಾ "ದುರ್ಗಾ ಸೂಕ್ತಂ"ನ ಶ್ಲೋಕಗಳನ್ನು ಪಠಿಸುತ್ತಿರುವುದನ್ನು ಕಾಣಬಹುದು.

ನವದೆಹಲಿ, ಮಾರ್ಚ್ 25: ದೆಹಲಿ ವಿಮಾನ ನಿಲ್ದಾಣದಲ್ಲಿ ಬಿಜೆಪಿ (BJP) ನಾಯಕಿ ಮಾಧವಿ ಲತಾ (Madhavi Latha) ಅವರು ಪ್ರಾರ್ಥನೆ ಮಾಡಿರುವ ವಿಡಿಯೋ ವಿವಾದಕ್ಕೆ ಕಾರಣವಾಗಿದೆ. ವಿಮಾನ ನಿಲ್ದಾಣದ ಮಹಿಳಾ ಪ್ರಾರ್ಥನಾ ಕೊಠಡಿಯೊಳಗೆ ಮಾಧವಿ ಲತಾ ಮುಸ್ಲಿಂ ಮಹಿಳೆಯರೊಂದಿಗೆ ಕುಳಿತು ದೇವರ ಶ್ಲೋಕಗಳನ್ನು ಹೇಳಿದ್ದಾರೆ. ವಿಮಾನ ನಿಲ್ದಾಣದ ಪ್ರಾರ್ಥನಾ ಸ್ಥಳದೊಳಗೆ ಮಾಧವಿ ಲತಾ “ದುರ್ಗಾ ಸೂಕ್ತಂ”ನ ಶ್ಲೋಕಗಳನ್ನು ಪಠಿಸಿದ್ದಾರೆ. ಈ ವಿಡಿಯೋವನ್ನು ಅವರು ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಲವರು ಅವರಿಗೆ ಬೆಂಬಲ ನೀಡಿದ್ದರೆ ಇನ್ನು ಕೆಲವರು ವಿರೋಧಿಸಿದ್ದಾರೆ. ಈ ವಿಡಿಯೋ ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us