ರೌಡಿಗಳನ್ನು ಜೊತೆಗಿಟ್ಟುಕೊಂಡು ತಿರುಗುವ ಬಿಜೆಪಿ ನಾಯಕರಿಗೆ ನೈತಿಕತೆ ಬಗ್ಗೆ ಮಾತಾಡುವ ಹಕ್ಕಿಲ್ಲ: ಹೆಚ್ ಡಿ ಕುಮಾರಸ್ವಾಮಿ

|

Updated on: Mar 18, 2023 | 7:10 PM

ವೇದಿಕೆಗಳ ಮೇಲೆ ನೈತಿಕತೆ ಬಗ್ಗೆ ಮಾತಾಡುವ ಬಿಜೆಪಿ ನಾಯಕರ ಅಸಲಿ ನಡವಳಿಕೆ ಅದಕ್ಕೆ ತದ್ವಿರುದ್ಧವಾಗಿರುತ್ತದೆ ಅಂತ ಮಾಜಿ ಮುಖ್ಯಮಂತ್ರಿ ಹೇಳಿದರು.

ಬೆಂಗಳೂರು: ಜೆಡಿಎಸ್ ಪಕ್ಷದ ಹಿರಿಯ ನಾಯಕ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಇಂದು ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಮುಂಬರುವ ದಿನಗಳಲ್ಲಿ ರೌಡಿಶೀಟರ್ ಗಳಾದ ಸೈಲಂಟ್ ಸುನೀಲ (Silent Sunil) ಮತ್ತು ಸ್ಯಾಂಟ್ರೋ ರವಿ (Santro Ravi) ಮೊದಲಾವದರು ಬಿಜೆಪಿಯ ನಾಯಕರಾಗಲಿರುವುದರಿಂದ ಅಂಥ ಸಂಗತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅವಶ್ಯಕತೆಯಿಲ್ಲ ಎಂದು ಹೇಳಿದರು. ಕುಖ್ಯಾತ ರೌಡಿಗಳನ್ನು ಜೊತೆಗಿಟ್ಟುಕೊಂಡು ತಿರುಗುವ ಬಿಜೆಪಿ ನಾಯಕರಿಗೆ ನೈತಿಕತೆ ಬಗ್ಗೆ ಮಾತಾಡುವ ಹಕ್ಕಿಲ್ಲ ಎಂದು ಕುಮಾರಸ್ವಾಮಿ ಹೇಳಿದರು. ವೇದಿಕೆಗಳ ಮೇಲೆ ನೈತಿಕತೆ ಬಗ್ಗೆ ಮಾತಾಡುವ ಬಿಜೆಪಿ ನಾಯಕರ ಅಸಲಿ ನಡವಳಿಕೆ ಅದಕ್ಕೆ ತದ್ವಿರುದ್ಧವಾಗಿರುತ್ತದೆ ಅಂತ ಮಾಜಿ ಮುಖ್ಯಮಂತ್ರಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 18, 2023 07:10 PM