Hailstorm: ಯಾದಗಿರಿಯ ಬಿರು ಬೇಸಿಗೆಯಲ್ಲಿ ಆಲಿಕಲ್ಲು ಸಮೇತ ಜೋರು ಬೆಳೆ, ಟೊಮೆಟೊ ಮತ್ತು ಹಸಿರು ಮೆಣಸಿನಕಾಯಿ ಬೆಳೆಗೆ ಹಾನಿ

Arun Kumar Belly

|

Updated on:Mar 18, 2023 | 5:48 PM

ವಿಡಿಯೋದಲ್ಲಿ ಕಾಣುತ್ತಿರುವಂತೆ ಜಮೀನೊಂದರಲ್ಲಿ ಬೆಳೆದು ನಿಂತ ಟೊಮೆಟೊ ಮತ್ತು ಹಸಿರುಮೆಣಸಿನಕಾಯಿ ಬೆಳೆಗಳು ನೆಲಕ್ಕೆ ಬಿದ್ದು ಹಾಳಾಗಿವೆ.

ಯಾದಗಿರಿ: ಜಿಲ್ಲೆಯಲ್ಲಿ ಕಳೆದ ರಾತ್ರಿ ಅಲಿಕಲ್ಲು ಸಮೇತ ಜೋರು (hailstorm) ಮಳೆಯಾಗಿದೆ. ಬಿರುಬೇಸಿಗೆಯಲ್ಲಿ ಮಳೆ ಸುರಿದ ಕಾರಣ ತಾಪಮಾನ (temperature) ತಗ್ಗಿದೆಯಾದರೂ ಅದರಿಂದ ಅವಾಂತರಗಳು ಸೃಷ್ಟಿಯಾಗಿವೆ. ಮೊಬೈಲ್ ಕೆಮೆರಾ ಪೋನ್ ಮೂಲಕ ಮಾಡಿರುವ ವಿಡಿಯೋದಲ್ಲಿ ಕಾಣುತ್ತಿರುವಂತೆ ಜಮೀನೊಂದರಲ್ಲಿ ಬೆಳೆದು ನಿಂತ ಟೊಮೆಟೊ ಮತ್ತು ಹಸಿರುಮೆಣಸಿನಕಾಯಿ (green chilly) ಬೆಳೆಗಳು ನೆಲಕ್ಕೆ ಬಿದ್ದು ಹಾಳಾಗಿವೆ. ಜಮೀನಿನಲ್ಲಿ ಆಲಿಕಲ್ಲುಗಳನ್ನು ನೋಡಬಹುದು. ಟಿವಿ9 ಯಾದಗಿರಿ ಜಿಲ್ಲಾ ವರದಿಗಾರ ನೀಡಿರುವ ಮಾಹಿತಿ ಪ್ರಕಾರ ಯಾದಗಿರಿ ಜಿಲ್ಲಾ ಕೇಂದ್ರದಲ್ಲಿ ತಾಮಮಾನ 40-41 ಡಿಗ್ರಿ ಸೆಲ್ಸಿಯಷ್ಟಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada