MLA mocks LOP : ಕೇಂದ್ರ ಹಾಗೂ ರಾಜ್ಯ ಸರ್ಕಾರ ಫಲಾನುಭವಿಗಳ ಸಮಾವೇಶದಲ್ಲಿ ಸಿದ್ದರಾಮಯ್ಯರನ್ನು ಅಣಕಿಸಿದ ಬಸನಗೌಡ ಯತ್ನಾಳ್
ಮುಂದುವರಿದು ಮಾತಾಡಿದ ಯತ್ನಾಳ್, ಪ್ರಧಾನ ಮಂತ್ರಿ ನರೇಂದ್ರ ಮೋದಿ ಒಂದು ಬಟನ್ ಒತ್ತಿದರೆ ಎಲ್ಲರ ಖಾತೆಗಳಿಗೆ ರೂ 100 ಜಮೆಯಾಗುತ್ತದೆ ಎಂದರು. ಹೇಗೆ ಅಂತ ವಿವರಿಸಲಿಲ್ಲ.
ವಿಜಯಪುರ: ನಗರದಲ್ಲಿ ಇಂದು ಅಯೋಜಿಸಲಾಗಿದ್ದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಫಲಾನುಭವಿಗಳ ಸಮಾವೇಶದಲ್ಲಿ ಮಾತಾಡಿದ ಸ್ಥಳೀಯ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಕಾಂಗ್ರೆಸ್ ಪಕ್ಷ್ದದ ನಾಯಕ ಸಿದ್ದರಾಮಯ್ಯರನ್ನು (Siddaramaiah) ಅಣಕಿಸುತ್ತಾ ಮಾತಾಡಿದರು. ಕಾಂಗ್ರೆಸ್ ಪಕ್ಷ 200 ಯುನಿಟ್ ಉಚಿತ ವಿದ್ಯುತ್, ಗೃಹಿಣಿಯರಿಗೆ ತಿಂಗಳಿಗೆ ರೂ. 2,000 ಸಹಾಯ ಧನ ಮತ್ತು ಪ್ರತಿ ಮನೆಗೆ ಹತ್ತು ಕೇಜಿ ಅಕ್ಕಿ ಕೊಡುವ ಭರವಸೆ ನೀಡಿದೆ ಮತ್ತು ಅದರ ವಿಡಿಯೋ ತಯಾರಿಸಿ ಕಾರ್ಯಕರ್ತರಿಗೆ ತಲುಪಿಸಿದೆ. ವಿಡಿಯೋ ದಲ್ಲಿ ಸಿದ್ದರಾಮಯ್ಯ ಮಾತಾಡಿರುವ ರೀತಿಯನ್ನು ಅಣುಕಿಸಿದ ಯತ್ನಾಳ್, ವಿರೋಧ ಪಕ್ಷದ ನಾಯಕ ಈಗ ಹಣೆಗೆ ತಿಲಕ ಇಟ್ಟುಕೊಳ್ಳಲಾರಂಭಿಸಿದ್ದಾರೆ ಎಂದರು. ಮುಂದುವರಿದು ಮಾತಾಡಿದ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಒಂದು ಬಟನ್ ಒತ್ತಿದರೆ ಎಲ್ಲರ ಖಾತೆಗಳಿಗೆ ರೂ. 100 ಜಮೆಯಾಗುತ್ತದೆ ಎಂದರು. ಹೇಗೆ ಅಂತ ವಿವರಿಸಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos