AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Rain: ಬೀದರ್​ನಲ್ಲಿ ಆಲಿಕಲ್ಲು ಮಳೆ, ಹಿಮದಂತೆ ಕಾಣಿಸುತ್ತಿರುವ ರಸ್ತೆಯಲ್ಲಿ ಸಾರ್ವಜನಿಕರ ಆಟKarnataka Rain: ಬೀದರ್​ನಲ್ಲಿ ಆಲಿಕಲ್ಲು ಮಳೆ, ಹಿಮದಂತೆ ಕಾಣಿಸುತ್ತಿರುವ ರಸ್ತೆಯಲ್ಲಿ ಸಾರ್ವಜನಿಕರ ಆಟ

Karnataka Rain: ಬೀದರ್​ನಲ್ಲಿ ಆಲಿಕಲ್ಲು ಮಳೆ, ಹಿಮದಂತೆ ಕಾಣಿಸುತ್ತಿರುವ ರಸ್ತೆಯಲ್ಲಿ ಸಾರ್ವಜನಿಕರ ಆಟ

Rakesh Nayak Manchi
Rakesh Nayak Manchi|

Updated on:Mar 18, 2023 | 7:55 PM

Share

ಕರ್ನಾಟಕದಲ್ಲಿ ಕಳೆದ ಒಂದೆರಡು ದಿನಗಳಿಂದ ಮಳೆಯಾಗುತ್ತಿದ್ದು, ಇಂದೂ ಕೆಲವೆಡೆ ತುಂತುರು ಮಳೆ, ಆಲಿಕಲ್ಲು ಮಳೆಯಾಗಿದೆ. ಬೀದರ್​ನಲ್ಲಿ ಆದ ಆಲಿಕಲ್ಲು ಮಳೆಗೆ ರಸ್ತೆಗಳು ಹಿಮಾಚಲ ಪ್ರದೇಶದಂತೆ ಕಾಣಿಸುತ್ತಿದ್ದವು.

ಬೀದರ್: ಕರ್ನಾಟಕದಲ್ಲಿ ಕಳೆದ ಒಂದೆರಡು ದಿನಗಳಿಂದ ಮಳೆಯಾಗುತ್ತಿದ್ದು (Karnataka Rains), ಇಂದೂ ಕೆಲವೆಡೆ ತುಂತುರು ಮಳೆ, ಆಲಿಕಲ್ಲು ಮಳೆಯಾಗಿದೆ. ಬೀದರ್​ನಲ್ಲಿ ಆದ ಆಲಿಕಲ್ಲು ಮಳೆಗೆ (Hailstorm in Bidar) ರಸ್ತೆಗಳು ಹಿಮಾಚಲ ಪ್ರದೇಶದಂತೆ ಕಾಣಿಸುತ್ತಿದ್ದವು. ಬೀದರ್ ತಾಲೂಕಿನ ಜನವಾಡ ಬಳಿ ಆಲಿಕಲ್ಲು ಮಳೆಯಾಗಿದ್ದು, ಹಿಮಾಲಯ ನೆನಪಿಸುವ ರೀತಿಯಲ್ಲಿ ಆಲಿಕಲ್ಲು ಮಳೆಯಾಗಿದೆ. ರಸ್ತೆಗಳು ಹಿಮದಿಂದ ಕೂಡಿದಂತೆ ಕಾಣುತ್ತಿದ್ದರಿಂದ ಸ್ಥಳದಲ್ಲಿ ಜಮಾಯಿಸಿದ ಜನರು ಆಲಿಕಲ್ಲು ಮೇಲೆ ಉರುಳಾಡಿ ಪೋಟೋ ತೆಗೆಸಿಕೊಂಡರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Mar 18, 2023 07:55 PM

Follow Us
Rakesh Nayak Manchi
Rakesh Nayak Manchi

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್​ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್​ನಲ್ಲಿ ಕೆಲಸ ಮಾಡುತ್ತಿದ್ದೇನೆ.