ಚಿಕ್ಕಮಗಳೂರು: ಮಾಜಿ ಸಚಿವೆ ಮೋಟಮ್ಮ (Motamma) ಪುತ್ರಿ, ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಯನ ಮೋಟಮ್ಮರಿಂದ ಮತದಾರರಿಗೆ ಗಿಫ್ಟ್ ಪಾಲಿಟಿಕ್ಸ್ ನಡೆಸಿದ್ದಾರೆ ಎನ್ನಲಾಗುತ್ತಿದೆ. ರಂಗೋಲಿ ಸ್ಪರ್ಧೆ ಆಯೋಜನೆ ಮೂಲಕ ಮೂಡಿಗೆರೆ ಮೀಸಲು ಕ್ಷೇತ್ರದ ಮತದಾರರಿಗೆ ಸೀರೆ, ಪುಸ್ತಕ, ಪೆನ್ಗಳಂತಹ ವೆರೈಟಿ ವೆರೈಟಿ ಗಿಫ್ಟ್ ಭಾಗ್ಯ ನೀಡಿದ್ದಾರೆ. ಆ ಮೂಲಕ ಮತದಾರರ ಮನ ಗೆಲ್ಲಲು ಹೊರಟಿದ್ದಾರೆ. ಗ್ರಾಮ ಮಟ್ಟದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಆಯೋಜನೆ ಮಾಡಿದ್ದು, ಸ್ಪರ್ಧೆಯಲ್ಲಿ ಭಾಗಿಯಾದವರಿಗೆ 5000 ಹಣ ಮತ್ತು ಸೀರೆ ಗಿಫ್ಟ್ ನೀಡಿದ್ದಾರೆ. ಮತದಾರರ ಸೆಳೆಯಲು ವೆರೈಟಿ ವೆರೈಟಿ ಗಿಫ್ಟ್ ಗಿಮಿಕ್ ನಯನ ಮಾಡುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.