ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಕಾಣೆಯಾಗಿದ್ದಾರೆ ಅಂತ ಬಿಜೆಪಿ ನಾಯಕರ ಪೋಸ್ಟರ್ ಅಭಿಯಾನ

ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ಧ ಕಾಣೆಯಾಗಿದ್ದಾರೆ ಅಂತ ಬಿಜೆಪಿ ನಾಯಕರ ಪೋಸ್ಟರ್ ಅಭಿಯಾನ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Nov 08, 2022 | 11:36 AM

ಪ್ರಿಯಾಂಕ್ ಖರ್ಗೆ ಒಂದೂವರೆ ತಿಂಗಳಿಂದ  ಕಾಣಿಸಿಕೊಂಡಿಲ್ಲ ಎಂದು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಚಿತ್ತಾಪುರದ ಪಟ್ಟಣದ ಪ್ರಮುಖ ಭಾಗಗಳಲ್ಲಿ ಪೋಸ್ಟರ್​ಗಳನ್ನು ಅಂಟಿಸಿ ಮುಷ್ಕರ ನಡೆಸುತ್ತಿದ್ದಾರೆ.

ಕಲಬುರಗಿ: ಅತ್ತ ಅಪ್ಪ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) (AICC) ಅಧ್ಯಕ್ಷರಾಗುತ್ತಿದ್ದಂತೆಯೇ ಇತ್ತ ಚಿತ್ತಾಪುರನಲ್ಲಿ ಮಗನ ವಿರುದ್ಧ ಪೋಸ್ಟರ್ ಅಭಿಯಾನ ಶುರುವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಪುತ್ರ ಪ್ರಿಯಾಂಕ್ ಖರ್ಗೆ (Priyank Kharge) ಚಿತ್ತಾಪುರದ ಶಾಸಕ ಅಂತ ಎಲ್ಲರಿಗೂ ಗೊತ್ತು. ಆದರೆ, ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ ಒಂದೂವರೆ ತಿಂಗಳಿಂದ  ಕಾಣಿಸಿಕೊಂಡಿಲ್ಲ ಎಂದು ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಚಿತ್ತಾಪುರದ ಪಟ್ಟಣದ ಪ್ರಮುಖ ಭಾಗಗಳಲ್ಲಿ ಪೋಸ್ಟರ್ ಗಳನ್ನು ಅಂಟಿಸಿ ಮುಷ್ಕರ ನಡೆಸುತ್ತಿದ್ದಾರೆ.

Published on: Nov 08, 2022 11:36 AM