Pragati Shetty: ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಹೀರೋಯಿನ್ ಆಗ್ತಾರಾ? ನೇರ ಪ್ರಶ್ನೆಗೆ ಸಿಕ್ತು ಉತ್ತರ
Rishab Shetty wife Pragati Shetty: ಪ್ರಗತಿ ಶೆಟ್ಟಿ ಅವರು ಕಾಸ್ಟ್ಯೂಮ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಇಬ್ಬರು ಮಕ್ಕಳ ಆರೈಕೆಯಲ್ಲಿ ಅವರು ತೊಡಗಿಕೊಂಡಿದ್ದಾರೆ.
‘ಕಾಂತಾರ’ (Kantara) ಚಿತ್ರ ಸೂಪರ್ ಹಿಟ್ ಆಗಿದೆ. ಈ ಚಿತ್ರದಿಂದ ನಟ ರಿಷಬ್ ಶೆಟ್ಟಿ (Rishab Shetty) ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. ರಿಷಬ್ ಪತ್ನಿ ಪ್ರಗತಿ ಶೆಟ್ಟಿ (Pragati Shetty) ಅವರು ಚಿತ್ರರಂಗದಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಪತಿಯ ಸಿನಿಮಾದಲ್ಲಿ ಅವರು ಚಿಕ್ಕ ಪುಟ್ಟ ಪಾತ್ರ ಮಾಡಿದ್ದುಂಟು. ಮುಂದೇನಾದರೂ ಅವರು ಹೀರೋಯಿನ್ ಆಗುತ್ತಾರಾ? ಈ ನೇರ ಪ್ರಶ್ನೆಗೆ ಪ್ರಗತಿ ಉತ್ತರ ನೀಡಿದ್ದಾರೆ. ಫುಲ್ ಟೈಮ್ ನಟನೆ ಮಾಡುವ ಆಸಕ್ತಿ ಸದ್ಯಕ್ಕೆ ಇಲ್ಲ ಎಂದು ಅವರು ಹೇಳಿದ್ದಾರೆ. ಕಾಸ್ಟ್ಯೂಮ್ ಡಿಸೈನ್ ಮತ್ತು ಇಬ್ಬರು ಮಕ್ಕಳ ಆರೈಕೆಯಲ್ಲಿ ಅವರು ತೊಡಗಿಕೊಂಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Nov 08, 2022 09:40 AM
Latest Videos