Karnataka Assembly Polls: ಟಿಕೆಟ್ ನಿರಾಕರಣೆಯಿಂದ ರೊಚ್ಚಿಗೆದ್ದು ಮೂಡಿಗೆರೆ ಬಿಜೆಪಿ ಶಾಸಕ ಎಂಪಿ ಕುಮಾರಸ್ವಾಮಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ!
ಟಿಕೆಟ್ ಸಿಗದಿರುವುದಕ್ಕೆ ಕುಮಾರಸ್ವಾಮಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿಯನ್ನು ದೂಷಿಸುತ್ತಿದ್ದಾರೆ.
ಚಿಕ್ಕಮಗಳೂರು: ಕನ್ನಡಿಗರು ಎರಡೂ ಅಂಶಗಳನ್ನು ನಿರೀಕ್ಷಿಸಿದ್ದರು. ಮೊದಲನೆಯದ್ದು, ಮೂಡಿಗೆರೆ ಬಿಜೆಪಿ ಶಾಸಕ (Mudigere BJP MLA) ಎಂಪಿ ಕುಮಾರಸ್ವಾಮಿಗೆ (MP Kumaraswamy) ಪಕ್ಷ ಟಿಕೆಟ್ ನಿರಾಕರಿಸುವುದು ಮತ್ತ್ತು ಎರಡನೇಯದ್ದು ಟಿಕೆಟ್ ಸಿಗದ ಪಕ್ಷದಲ್ಲಿ ಅವರು ಬಿಜೆಪಿಯಿಂದ ಹೊರಬೀಳುವುದು. ಅವರ ನಿರೀಕ್ಷೆಯಂತೆಯೇ ಆಗಿದೆ. ಬಿಜೆಪಿ ಬಿಡುಗಡೆ ಮಾಡಿದ ಎರಡನೇ ಪಟ್ಟಿಯಲ್ಲಿ ಹೆಸರು ಕಾಣದೆ ಹೋದಾಗ ಕುಮಾರಸ್ವಾಮಿ ಪಕ್ಷದ ಪ್ರಾಥಮಿಕ ಸ್ಥಾನಕ್ಕೆ ಮತ್ತು ಶಾಸಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಟಿಕೆಟ್ ಸಿಗದಿರುವುದಕ್ಕೆ ಕುಮಾರಸ್ವಾಮಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿಯನ್ನು (CT Ravi) ದೂಷಿಸುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 13, 2023 11:02 AM
Latest Videos