ಬಿಜೆಪಿ ಶಾಸಕ ಮುನಿರತ್ನ ಅನುದಾನ ಪರ್ವ ಸುಖಾಂತ್ಯ ಕಂಡಿದೆ, ಮನೆಗೆ ಕರೆಸಿ ಮಾತಾಡಿದ ಡಿಕೆ ಶಿವಕುಮಾರ್!

|

Updated on: Oct 11, 2023 | 4:39 PM

ಮುನಿರತ್ನ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯನವರ ಆಪ್ತರಲ್ಲಿ ಒಬ್ಬರಾಗಿದ್ದರು. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ದೋಸ್ತಿ ಮುರಿದು ಬಿತ್ತು. ಅದರೆ, ಶಿವಕುಮಾರ್ ಹಳೆಯದನ್ನು ನೆನಪಿಗೆ ತಂದುಕೊಳ್ಳದೆ ಮುನಿರತ್ನ ಜೊತೆ ಸಲುಗೆ ಹಾಗೂ ಆತ್ಮೀಯತೆಯಿಂದ ಮಾತಾಡಿದರು. ರಾಜರಾಜೇಶ್ವರಿ ನಗರದ ಎಲ್ಲ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ಅವರು ಮುನಿರತ್ನಗೆ ನೀಡಿದ್ದಾರಂತೆ.

ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ಪರ್ವ ಸುಖಾಂತ್ಯ ಕಂಡಿದೆ! ನಿನ್ನೆ ಮಧ್ಯಾಹ್ನದದಿಂದ ಅನುದಾನ ಪರ್ವ ನಡೆಯುತಿತ್ತ. ಇವತ್ತು ವಿಧಾನ ಸೌಧ ಆವರಣದಲ್ಲಿ (Vidhana Soudha) ಗಾಂಧಿ ಪ್ರತಿಮೆ ಕುಳಿತು ಪ್ರತಿಭಟನೆ ನಡೆಸಿದ ಬಳಿಕ ಮುನಿರತ್ನ (Munirathna Naidu) ಅರಮನೆ ಮೈದಾನಕ್ಕೆ ಹೋಗಿ ಅನುದಾನ ಬಿಡುಗಡೆ ಮಾಡುವಂತೆ ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ (DK Shivakumar) ಅವರ ಕಾಲಿಗೆ ಬಿದ್ದು ಮನವಿ ಸಲ್ಲಿಸಿ, ಸಚಿವರ ಮನೆಗೆ ತೆರಳಿ ಮಾತುಕತೆ ನಡೆಸಿದ ಬಳಿಕ ಪ್ರಹಸನಕ್ಕೆ ತೆರೆ ಬಿದ್ದಿದೆ. ಈ ವಿಡಿಯೋದಲ್ಲಿ ಮುನಿರತ್ನ ಶಿವಕುಮಾರ್ ನಿವಾಸಕ್ಕೆ ಆಗಮಿಸಿರುವದನ್ನು ನೋಡಬಹುದು. ಬಳಿಕ ಉಪ ಮುಖ್ಯಮಂತ್ರಿ ಜೊತೆ ವನ್-ಆನ್-ವನ್ ಮಾತುಕತೆ ನಡೆದಿದ್ದು ಮುನಿರತ್ನ ಸಂತುಷ್ಟರಾಗಿ ಅಲ್ಲಿಂದ ಹೊರಬಿದ್ದಿದ್ದಾರೆ. ಇವರಿಬ್ಬರ ನಡುವೆ ಬಹಳ ದಿನಗಳಿಂದ ದೋಸ್ತಿ ಇರೋದು ಕನ್ನಡಿಗರಿಗೆ ಗೊತ್ತಿಲ್ಲದಿಲ್ಲ. ಮುನಿರತ್ನ ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಿದ್ದರಾಮಯ್ಯನವರ ಆಪ್ತರಲ್ಲಿ ಒಬ್ಬರಾಗಿದ್ದರು. ನಂತರ ಬದಲಾದ ರಾಜಕೀಯ ಸನ್ನಿವೇಶದಲ್ಲಿ ದೋಸ್ತಿ ಮುರಿದು ಬಿತ್ತು. ಅದರೆ, ಶಿವಕುಮಾರ್ ಹಳೆಯದನ್ನು ನೆನಪಿಗೆ ತಂದುಕೊಳ್ಳದೆ ಮುನಿರತ್ನ ಜೊತೆ ಸಲುಗೆ ಹಾಗೂ ಆತ್ಮೀಯತೆಯಿಂದ ಮಾತಾಡಿದರು. ರಾಜರಾಜೇಶ್ವರಿ ನಗರದ ಎಲ್ಲ ಕಾಮಗಾರಿಗಳಿಗೆ ಅನುದಾನ ಬಿಡುಗಡೆ ಮಾಡುವ ಭರವಸೆಯನ್ನು ಅವರು ಮುನಿರತ್ನಗೆ ನೀಡಿದ್ದಾರಂತೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on